ಕನ್ನಡ ಸೇವಾ ರತ್ನ ಪ್ರಶಸ್ತಿ ಪ್ರದಾನ
Update: 2018-09-29 21:51 IST
ಬೆಂಗಳೂರು, ಸೆ.29: ರೈಲ್ವೇ ಇಲಾಖೆಯ ಸಿಬ್ಬಂದಿ ಹಾಗೂ ಕಬಡ್ಡಿ ಕ್ರೀಡೆಯಲ್ಲಿ ಅಪಾರ ಸಾಧನೆಗೈದಿರುವ ಎಚ್.ಬಿ.ಚಲುವರಾಜು, ಸಮಾಜ ಸೇವಕ ಟಿ.ಎಂ.ಸಹದೇಶ್, ಸಾಹಿತಿ ಮುಹಮ್ಮದ್ ರಫೀಕ್ ನದಾಫ್ ಸೇರಿದಂತೆ ವಿವಿಧ ಕ್ಷೇತ್ರದ ಸಾಧಕರಿಗೆ ಕನ್ನಡ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಶನಿವಾರ ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಅನಿಕೇತನ ಕನ್ನಡ ಬಳಗ, ಪರಸ್ಪರ ಸ್ನೇಹ ಬಳಗ ಏರ್ಪಡಿಸಿದ್ದ, ವಿವಿಧ ದತ್ತಿ ಉಪನ್ಯಾಸ ಮತ್ತು ಗೀತಗಾಯನ ಕವಿಗೋಷ್ಠಿ, ಯುವ ಕಾವ್ಯ ಪ್ರತಿಭಾ ಪ್ರಶಸ್ತಿ ಕನ್ನಡ ಸೇವಾ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜರುಗಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಮಾಯಣ್ಣ ಸೇರಿದಂತೆ ಪ್ರಮುಖರಿದ್ದರು.