ಬಾಪು ಮತ್ತು ವ್ಯಂಗ್ಯ ಚಿತ್ರ

Update: 2018-09-29 18:24 GMT

ವ್ಯಂಗ್ಯಚಿತ್ರವೆನ್ನುವುದು ಒಂದು ರಾಜಕೀಯ ಕ್ರಿಯೆ ಹಾಗೂ ಓದುಗರು ಅವುಗಳ ಬಗ್ಗೆ ಗಮನ ಹರಿಸಬೇಕು ಎನ್ನುವುದನ್ನು ಸೂಚಿಸುತ್ತಿರುವಂತೆ ಆಧುನಿಕ ನಾಗರಿಕತೆಯ ವಿರುದ್ಧ ಸತ್ಯಾಗ್ರಹವನ್ನು ತನ್ಮೂಲಕ ಪಶ್ಚಿಮದ ವಿರುದ್ಧ ಪೂರ್ವವನ್ನು ನಿಲ್ಲಿಸುವ ಪ್ರಯತ್ನವನ್ನೂ ಮಾಡುತ್ತಿದ್ದರು.

2004ರಲ್ಲಿ ಆಗ ಅಮೆರಿಕದ ಸೆನೆಟರ್ ಆಗಿದ್ದ ಹಿಲರಿ ಕ್ಲಿಂಟನ್ ಹಣ ಸಂಗ್ರಹಣಾ ಕಾರ್ಯಕ್ರಮವೊಂದರಲ್ಲಿ ಮಹಾತ್ಮಾ ಗಾಂಧಿಯ ಬಗ್ಗೆ ತಮಾಷೆ ಮಾಡುತ್ತಾ ‘‘ಆತ ಇಲ್ಲೇ ಸೇಂಟ್ ಲೂಯಿಯಲ್ಲಿ ಗ್ಯಾಸ್ ಸ್ಟೇಶನ್ ನಡೆಸುತ್ತಿದ್ದ’’ ಎಂದು ಹೇಳಿದರು. ಜನರ ನಗು ಕಡಿಮೆಯಾದ ಮೇಲೆ ‘‘ಇಲ್ಲ, ಮಹಾತ್ಮ್ಮಾ ಗಾಂಧಿ 20ನೇ ಶತಮಾನ ಕಂಡ ಮಹಾನ್ ನಾಯಕ’’ ಎಂದು ಹೇಳಿ ತಮ್ಮ ಕುಹಕವನ್ನು ಇಲ್ಲವಾಗಿಸಿದರು. ಆದರೆ ಗಾಂಧಿ ಆಗ ಇದ್ದಿದ್ದರೂ ಯಾರಾದರೂ ಅವರನ್ನು ಲೇವಡಿ, ವಿಡಂಬನೆ ಅಥವಾ ತಮಾಷೆ ಮಾಡಿದಲ್ಲಿ ಅವರು ಸಿಟ್ಟು ಮಾಡಿಕೊಳ್ಳುತ್ತಿರಲಿಲ್ಲವೆಂಬುದು ಚರಿತ್ರೆಯೇ ಹೇಳಿದೆ. ಈ ಸಂದರ್ಭದಲ್ಲಿ ಗಾಂಧಿ ಹೇಳಿರುವ ‘‘ನನ್ನ ಅನುಮತಿ ಯಿಲ್ಲದೆ ಯಾರೂ ನನ್ನನ್ನು ಅವಮಾನಿಸಲು ಸಾಧ್ಯವಿಲ್ಲ’’ ಎಂಬ ಮಾತು ಹಾಗೂ 1928ರಲ್ಲಿ ಹೇಳಿದ ‘‘ನನ್ನಲ್ಲಿ ವಿನೋದಪ್ರಿಯತೆ ಇಲ್ಲದಿದ್ದಲ್ಲಿ ನಾನೆಂದೋ ಆತ್ಮಹತ್ಯೆ ಮಾಡಿಕೊಂಡಿರುತ್ತಿದ್ದೆ’’ ಎಂಬ ಮಾತುಗಳು ಅವರ ವ್ಯಕ್ತಿತ್ವ ಪರಿಚಯಿಸುವಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತವೆ.

ಮಹಾತ್ಮಾ ಗಾಂಧಿ ಎಂದಾಕ್ಷಣ ಅವರ ಗಂಭೀರ ಮುಖ, ಅಸಹಕಾರ ಹಾಗೂ ಅಹಿಂಸೆಯನ್ನೇ ಅಸ್ತ್ರವನ್ನಾಗಿಸಿಕೊಂಡ ಬದುಕಿನ ಹೋರಾಟ ನೆನಪಾಗಿ ಗಾಂಧಿಯ ಸ್ವಭಾವವೂ ಹಾಗೆಯೇ ಇತ್ತೆಂದು ಬಹಳ ಜನ ತಿಳಿಯುತ್ತಾರೆ. ಆದರೆ ಗಾಂಧಿಯ ತಮಾಷೆಯ ಮನೋಭಾವ, ಎಲ್ಲರನ್ನೂ ನಕ್ಕು ನಗಿಸುವ ವಾಕ್ಚಾತುರ್ಯ ಇವೇ ಅವರ ಸ್ವಾತಂತ್ರ ಹೋರಾಟದ ಕಷ್ಟಗಳನ್ನು ಎದುರಿಸಲು ಸಹಾಯ ಮಾಡಿದವು ಎನ್ನುತ್ತಾರೆ ಅವರನ್ನು ಹತ್ತಿರದಿಂದ ಕಂಡವರು. ತಮ್ಮ ಯೌವನದಲ್ಲಿ ದಕ್ಷಿಣ ಆಫ್ರಿಕಾಕ್ಕೆ ವಕೀಲರಾಗಿ ಹೋಗಿ ಅಲ್ಲಿ ನಾಗರಿಕ ಹಕ್ಕುಗಳಿಗಾಗಿ ಹೋರಾಡುವಾಗಲೇ ಅವರ ತಮಾಷೆಯ ಮನೋಭಾವವನ್ನು ಕಂಡವರಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಕ್ರಿಶ್ಚಿಯನ್ ರೀತಿಯಲ್ಲಿ ಮದುವೆಯಾಗದವರು ಗಂಡ ಹೆಂಡಿರೇ ಅಲ್ಲ ಎಂಬ ಕಾನೂನು ಹೊರಡಿಸಿದಾಗ, ಗಾಂಧಿ ತಮ್ಮ ಪತ್ನಿ ಕಸ್ತೂರಿಬಾರವರಿಗೆ, ‘‘ಇಷ್ಟು ದಿವಸ ನೀನು ನನ್ನ ಹೆಂಡತಿಯಾಗಿದ್ದೆ, ಇಂದಿನಿಂದ ನೀನು ಇಟ್ಟುಕೊಂಡವಳಾಗಿದ್ದೀಯೆ’’ ಎಂಬ ಕುಹಕವಾಡಿದ್ದರು. ಒಮ್ಮೆ ಪತ್ರಕರ್ತರು ‘‘ನೀವ್ಯಾಕೆ ಯಾವಾಗಲೂ ಟ್ರೈನಿನಲ್ಲಿ ಮೂರನೇ ದರ್ಜೆಯಲ್ಲೇ ಪ್ರಯಾಣಿಸುತ್ತೀರಾ?’’ ಎಂದು ಕೇಳಿದ್ದಕ್ಕೆ ‘‘ಏನು ಮಾಡಲಿ? ನಾಲ್ಕನೇ ದರ್ಜೆ ಇಲ್ಲವಲ್ಲಾ?’’ ಎಂದು ಕೇಳಿದ್ದರು. ಒಮ್ಮೆ ಅವರು ತಮ್ಮನ್ನು, ‘‘ನಾನು ಅಹಿಂಸಾ ಸೈನ್ಯದ ಕಮಾಂಡರ್’’ ಎಂದು ಹೇಳಿಕೊಂಡಿದ್ದರು.

ಗಾಂಧಿಯನ್ನು ಹತ್ತಿರದಿಂದ ಕಂಡವರು ಹಾಗೂ ಗಾಂಧಿಯ ಒಡನಾಟದಲ್ಲಿದ್ದ ವರೆಲ್ಲರೂ ಅವರ ತಮಾಷೆಯ ಮನೋಭಾವವನ್ನು ಕಂಡಿದ್ದಾರೆ. ಎಂಥ ಗಂಭೀರ ಚರ್ಚೆಯ ಸಭೆಯಲ್ಲಿ ಪಾಲ್ಗೊಂಡಿದ್ದರೂ ಹೊರಬರುವಾಗ ಸದಾ ಹಸನ್ಮುಖತೆ ಹೊಂದಿರುತ್ತಿದ್ದರು ಹಾಗೂ ಹೊರಗೆ ಕಾದಿರುತ್ತಿದ್ದ ಪತ್ರಕರ್ತರೊಂದಿಗೆ ಏನಾದರೂ ತಮಾಷೆಯ ಮಾತನಾಡುತ್ತಿದ್ದರು. ಗಾಂಧೀಜಿಯ ವಿಡಂಬನೆ ಯನ್ನು ಹರ್ಷದಾಯಕ ಅಥವಾ ಉಲ್ಲಾಸದಾಯಕ ಎಂದು ಕರೆದಿರುವ ಸರೋಜಿನಿ ನಾಯ್ಡುರವರು ಅದನ್ನು ನೇರ ಹಾಗೂ ಅದರಲ್ಲಿ ಕುಹಕವಿದ್ದರೂ ಇತರರನ್ನು ನೋಯಿಸುವ ಭಾವವಿರಲಿಲ್ಲ ಎಂದಿದ್ದಾರೆ.

ಗಾಂಧೀಜಿಯ ವಿಡಂಬನೆಯ ಮನೋಭಾವದ ಬಗ್ಗೆ ಒಮ್ಮೆ ರವೀಂದ್ರನಾಥರು, ‘‘ಆತ ಒಂದು ಮುಕ್ತ ಆತ್ಮ. ಯಾರಾದರೂ ಆತನ ಕುತ್ತಿಗೆಯನ್ನು ಬಿಗಿದರೆ, ಆತ ಅಳುವುದಿಲ್ಲವೆಂಬ ಖಾತರಿ ನನಗಿದೆ. ಆತ ತನ್ನ ಕುತ್ತಿಗೆ ಬಿಗಿಯುವನನ್ನು ನೋಡಿ ನಗಬಹುದು, ಆತ ಸಾಯಬೇಕಾದಲ್ಲಿ ಮುಗುಳ್ನಗುತ್ತಲೇ ಸಾಯುತ್ತಾನೆ’’ ಎಂದಿದ್ದರು. ‘‘ಗಾಂಧಿಯ ನಗು ತಿಳಿನೀರಿನಂತೆ ಸ್ವಚ್ಛವಾದುದು ಏಕೆಂದರೆ ಆತನಲ್ಲಿ ಅಂತಹ ಪ್ರಶಾಂತತೆಯಿತ್ತು. ಆತನ ವ್ಯಕ್ತಿತ್ವ ಸಹಜವಾದದ್ದು ಆತನ ಮನಸ್ಸಿನಲ್ಲಿ ಗೊಂದಲಗಳಿರುತ್ತಿರಲಿಲ್ಲ’’.

ಗಾಂಧಿ ಮತ್ತು ವ್ಯಂಗ್ಯಚಿತ್ರ

ರಾಜಕೀಯ ವ್ಯಂಗ್ಯಚಿತ್ರಗಳು ಪ್ರಾರಂಭದಿಂದಲೂ ರಾಜಕೀಯ ಸಂದೇಶಗಳನ್ನು ಕ್ಷಿಪ್ರವಾಗಿ, ಸಂಕ್ಷಿಪ್ತವಾಗಿ ಹಾಗೂ ನೇರವಾಗಿ ಓದುಗರಿಗೆ ತಲುಪಿಸುವ ಅತ್ಯಂತ ಸಕ್ಷಮ ಅಸ್ತ್ರಗಳಾಗಿವೆ. ಗಾಂಧಿ ತಮ್ಮ ಸಾಮಾಜಿಕ ಹಾಗೂ ರಾಜಕೀಯ ಜೀವನ ಪ್ರಾರಂಭವಾದಾಗಿನಿಂದಲೂ ವ್ಯಂಗ್ಯಚಿತ್ರಕಾರರ ಅತ್ಯುತ್ತಮ ವಸ್ತುವಾಗಿದ್ದರು. ಸ್ವಾತಂತ್ರ ಪೂರ್ವದಲ್ಲಿ ಗಾಂಧಿಯ ಅಹಿಂಸಾ ಹೋರಾಟ, ಅವರ ಲಂಗೋಟಿ ವಸ್ತ್ರ, ಅವರ ಸತ್ಯಾಗ್ರಹ ಮತ್ತು ಅಸಹಕಾರ ಚಳವಳಿ ಮುಂತಾದವುಗಳೆಲ್ಲಾ ವ್ಯಂಗ್ಯಚಿತ್ರಕಾರರ ವಿಡಂಬನೆಗೆ ವಸ್ತುಗಳಾಗಿದ್ದವು. ಈಗಿನ ಕೆಲವು ರಾಜ ಕಾರಣಿಗಳು ಸಿಟ್ಟಾಗುವಂತೆ ತಾವು ವ್ಯಂಗ್ಯಚಿತ್ರಕಾರರ ವಸ್ತು ವಾದಾಗಲೆಲ್ಲಾ ಗಾಂಧಿ ಎಂದೂ ತಮ್ಮ ಅಸಹನೆ, ಸಿಟ್ಟು ತೋರಿದವರಲ್ಲ. ಗಾಂಧಿ ಮತ್ತು ವ್ಯಂಗ್ಯಚಿತ್ರಗಳ ನಂಟು ಪ್ರಾರಂಭವಾದದ್ದು 1893ರಲ್ಲಿ ತಮ್ಮ ದಕ್ಷಿಣ ಆಫ್ರಿಕಾದ ವಾಸ ಪ್ರಾರಂಭಿಸಿದಾಗ. ದಕ್ಷಿಣಾ ಆಫ್ರಿಕಾದಲ್ಲಿ 1903ರಿಂದ 1914ರವರೆಗೆ ಗಾಂಧಿ ‘ಇಂಡಿಯನ್ ಒಪೀನಿಯನ್’ ಎಂಬ ಬಹುಭಾಷಿಕ ವೃತ್ತಪತ್ರಿಕೆಯನ್ನು ಸಂಪಾದಿಸಿದರು. ಗಾಂಧಿ ವ್ಯಂಗ್ಯಚಿತ್ರಗಳಲ್ಲಿ ತಾವೇ ವಸ್ತುವಾಗುವ ಮೊದಲು ಇಂಡಿಯನ್ ಒಪೀನಿಯನ್ ಪತ್ರಿಕೆಯಲ್ಲಿ ವ್ಯಂಗ್ಯಚಿತ್ರಗಳ ವ್ಯಾಖ್ಯಾನ ಪ್ರಾರಂಭಿಸಿದರು. ಬಹುಶಃ ದಕ್ಷಿಣ ಆಫ್ರಿಕಾದ ಈ ಪತ್ರಿಕೆಯಲ್ಲಿ ಭಾರತಕ್ಕೆ ಸಂಬಂಧಿಸಿದ ರಾಜಕೀಯದ ವ್ಯಂಗ್ಯಚಿತ್ರಗಳನ್ನು ವಿವರಿಸಿ ಹೇಳುವ ಮೊತ್ತಮೊದಲ ಪ್ರಯತ್ನ ಇದೆನ್ನಬಹುದು. ಈ ಪ್ರಯತ್ನದ ಹಿಂದೆ ಓದುಗರಿಗೆ ವಸಾಹತು ರಾಜಕೀಯವನ್ನು ಅರ್ಥೈಸಿಕೊಳ್ಳಲು ಕೌಶಲತೆ ಮತ್ತು ಸಾಂಸ್ಕೃತಿಕ ಬಂಡವಾಳ ದ ಅವಶ್ಯಕತೆ ಇದೆ ಎನ್ನುವುದು ಗಾಂಧಿಯವರ ಅಭಿಪ್ರಾಯವಾಗಿತ್ತು. ಇಂಗ್ಲೆಂಡಿನಲ್ಲಿ ಬ್ಯಾರಿಸ್ಟರ್ ಪದವಿ ಮುಗಿಸಿಕೊಂಡು ಬಂದು ಮುಂಬೈನಲ್ಲಿ ವಕೀಲಿ ವೃತ್ತಿಯಲ್ಲಿ ವಿಫಲರಾಗುವ ಸಮಯದಲ್ಲಿ ಅವರಿಗೆ ದಕ್ಷಿಣಾ ಆಫ್ರಿಕಾದಲ್ಲಿ ಗುಜರಾತ್ ಮೂಲದ ಕಕ್ಷಿದಾರರನ್ನು ಪ್ರತಿನಿಧಿಸುವ ಅವಕಾಶ ಬಂದಾಗ ಗಾಂಧಿ ದಕ್ಷಿಣ ಆಫ್ರಿಕಾಕ್ಕೆ ತೆರಳಿದರು. ಅಲ್ಲಿ ನಟಾಲ್‌ನಲ್ಲಿ ವಲಸೆ ಬಂದ ಭಾರತೀಯರ ಹಾಗೂ ಬಿಳಿಯ ಯೂರೋಪಿಯನ್ನರ ನಡುವೆ ಸಂಘರ್ಷವಿತ್ತು. ಗಾಂಧಿ ದಕ್ಷಿಣ ಆಫ್ರಿಕಾದಲ್ಲಿನ ಬ್ರಿಟಿಷರ ಯಾಜಮಾನ್ಯಕ್ಕೆ ವಿರೋಧವಾಗಿ ಹಾಗೂ ಭಾರತೀಯ ವಲಸೆಗಾರರ ಪರವಾಗಿ ಅವರ ಹಕ್ಕುಗಳ ಹೋರಾಟಕ್ಕೆ ಬೆಂಬಲವಾಗಿ ನಿಂತರು. ಹೋರಾಟಕ್ಕೆ ಬೇಕಿರುವುದು ದೈಹಿಕ ಶಕ್ತಿಯಲ್ಲ ಬದಲಿಗೆ ಬೇಕಾಗಿರುವುದು ಮನೋಬಲ ಎಂಬುದನ್ನು ಕಂಡುಕೊಂಡ ಗಾಂಧಿಯ ಮನಸ್ಸಿನಲ್ಲಿ ಅಹಿಂಸೆ ಮತ್ತು ಅಸಹಕಾರಗಳೆಂಬ ಪ್ರತಿಭಟನೆಯ ಅಸ್ತ್ರಗಳ ಪರಿಕಲ್ಪನೆ ಆಗಲೇ ಚಿಗುರೊಡೆಯಲು ಪ್ರಾರಂಭಿಸಿದ್ದು.

ಗಾಂಧೀಜಿಯ ರಾಜಕೀಯ ಸಕ್ರಿಯತೆಯ ಪ್ರಾರಂಭದ ಸಮಯದಲ್ಲಿ ವೃತ್ತಪತ್ರಿಕೆಯ ವ್ಯಂಗ್ಯಚಿತ್ರಗಳಲ್ಲಿಯೂ ಗಾಂಧಿ ಒಂದು ವಿಶಿಷ್ಟ ವ್ಯಾಖ್ಯಾನ ಕಾರ್ಯತಂತ್ರವನ್ನು ಕಂಡುಕೊಂಡರು. ವ್ಯಂಗ್ಯಚಿತ್ರಗಳಲ್ಲಿ ಸತ್ಯ ಹುದುಗಿರುತ್ತದೆ ಎಂದು ಭಾವಿಸಿದ ಅವರು ಅದು ಅದನ್ನು ಅರ್ಥೈಸಿಕೊಳ್ಳಬಲ್ಲವರಿಗೆ ಮಾತ್ರ ದಕ್ಕುತ್ತದೆ. ಹಾಗಾಗಿ ಅದನ್ನು ಬಹುಪಾಲು ಇಂಗ್ಲಿಷ್ ಅರ್ಥವಾಗದ ದಕ್ಷಿಣ ಆಫ್ರಿಕಾದಲ್ಲಿನ ವಲಸೆ ಬಂದಿರುವ ಭಾರತೀಯರಿಗೆ ಆ ಸತ್ಯದಲ್ಲಿನ ರಾಜಕೀಯ ಸಂದೇಶವನ್ನು ತಲುಪಿಸುವ ಕಾರ್ಯ ನಿರ್ವಹಿಸಬೇಕು ಎಂದು ನಿರ್ಧರಿಸಿದರು.

ಇಂಡಿಯನ್ ನಟಾಲ್ ಕಾಂಗ್ರೆಸ್‌ನ ಅಧ್ಯಕ್ಷರಾದ ಎಂ.ಎಚ್. ನಝರ್, ಮುದ್ರಣಾಲಯದ ಮಾಲಕರಾದ ಮದನ್‌ಜಿತ್ ಮತ್ತು ಗಾಂಧಿ ಸೇರಿ 1903ರಲ್ಲಿ ‘ಇಂಡಿಯನ್ ಒಪೀನಿಯನ್’ ಪತ್ರಿಕೆ ಪ್ರಾರಂಭಿಸಿದರು ಹಾಗೂ ಅದು ಇಂಗ್ಲಿಷ್, ಹಿಂದಿ, ಗುಜರಾತಿ ಮತ್ತು ತಮಿಳು ಭಾಷೆಗಳ ಚತುರ್ಭಾಷಾ ಪತ್ರಿಕೆಯಾಗಿತ್ತು. ಇತರ ಲೇಖನಗಳ ಜೊತೆಗೆ ಗಾಂಧಿ ವಲಸಿಗ ಭಾರತೀಯರಿಗೆ ರಾಜಕೀಯ ತಿಳಿವಳಿಕೆ ನೀಡುವ ಸಲುವಾಗಿ ಮೊತ್ತಮೊದಲಿಗೆ ಆ ಪತ್ರಿಕೆಯಲ್ಲಿ ರಾಜಕೀಯ ವ್ಯಂಗ್ಯಚಿತ್ರಗಳ ವಿಶ್ಲೇಷಣೆ ಮತ್ತು ವ್ಯಾಖ್ಯಾನವನ್ನು ನೀಡಲು ಪ್ರಾರಂಭಿಸಿದರು. 1907ರಲ್ಲಿ ತಮ್ಮ ಓದುಗರಿಗೆ ಬರೆದ ಟಿಪ್ಪಣಿಯೊಂದರಲ್ಲಿ, ‘ನಮ್ಮ ಭಾಷೆಗೆ ಗೌರವ ನೀಡುವ ಮೊದಲ ಹೆಜ್ಜೆಯಾಗಿ ನಿಮ್ಮ ನಿಮ್ಮ ಮಾತೃ ಭಾಷೆಗಳನ್ನು ಹೆಚ್ಚೆಚ್ಚು ಬಳಸಿ, ಆದಷ್ಟು ಅವುಗಳಲ್ಲಿ ವಿದೇಶಿ ಭಾಷೆಯ ಪದಗಳನ್ನು ಬಳಸಬೇಡಿ; ಅದು ಸಹ ದೇಶಭಕ್ತಿಯೇ. ಈ ಮುಂದಿನ ಪದಗಳಿಗೆ ಗುಜರಾತಿಯ ಸಮಾನಾಂತರ ಪದಗಳು ತಿಳಿದಿಲ್ಲದಿರುವು ದರಿಂದ ಅವುಗಳನ್ನು ಹಾಗೆಯೇ ಬಳಸುತ್ತಿದ್ದೇವೆ: Passive Resistance, Passive Resister, Cartoon, Civil Disobedience.. ಈ ಪದಗಳಿಗೆ ಗುಜರಾತಿ ಸಮಾನಾಂತರ ಪದಗಳು ಯಾರಿಗಾ ದರೂ ತಿಳಿದಿದ್ದರೆ ತಿಳಿಸಿ. ಅವುಗಳನ್ನು ಪ್ರಕಟಿಸುವಾಗ ಆ ಪದಗಳನ್ನು ಸೂಚಿಸಿದವರ ಹೆಸರುಗಳನ್ನೂ ಪ್ರಕಟಿಸಲಾಗುವುದು ಎಂದು ಬರೆದಿದ್ದರು. ಅಂದರೆ ‘ಕಾರ್ಟೂನ್’ ಎನ್ನುವುದು ಸತ್ಯಾಗ್ರಹ ಹಾಗೂ ಅಸಹಕಾರದಂತಹ ಪ್ರತಿಭಟನೆಯ ಅಸ್ತ್ರವೆನ್ನುವುದು ಅವರಿಗೆ ಮನದಟ್ಟಾಗಿತ್ತು. ‘ಇಂಡಿಯನ್ ಒಪೀನಿಯನ್’ ಪತ್ರಿಕೆಯಲ್ಲಿ ವ್ಯಂಗ್ಯಚಿತ್ರಗಳ ಪದಶಃ ಅರ್ಥವನ್ನಷ್ಟೇ ನೀಡಿದರೆ ಸಾಲದು ಎಂದು ಅವುಗಳ ಕುರಿತಂತೆ ದೀರ್ಘ ವ್ಯಾಖ್ಯಾನವನ್ನೂ ನೀಡತೊಡಗಿದರು. ಅಂತಹ ಒಂದು ವ್ಯಾಖ್ಯಾನದ ಸಂಕ್ಷಿಪ್ತ ರೂಪ ಇಲ್ಲಿದೆ:

-‘ದ ನ್ಯೂ ಏಜ್’ ಎನ್ನುವ ಇಂಗ್ಲಿಷ್ ಪತ್ರಿಕೆಯು ಈ ವಿಷಯದ ಕುರಿತು ವ್ಯಂಗ್ಯಚಿತ್ರವೊಂದನ್ನು ಪ್ರಕಟಿಸಿದೆ ಹಾಗೂ ಅದನ್ನು ನಾವು ಈ ಸಂಚಿಕೆಯಲ್ಲಿ ಮರುಮುದ್ರಿಸುತ್ತಿದ್ದೇವೆ. ಅದರಲ್ಲಿ ಒಂದು ಸೇನೆ ಮುನ್ನಡೆಯುತ್ತಿದೆ ಹಾಗೂ ಅದರ ಹಿಂದೆ ಒಂದು ಭಯಂಕರ ಆಕೃತಿಯ ಸೇನಾಧಿಪತಿಯ ರೂಪವೊಂದು ಸಹ ನಡೆಯುತ್ತಿದೆ. ಆ ಭಯಂಕರಾಕೃತಿ ಬಂದೂಕೊಂದನ್ನು ಹಿಡಿದಿದ್ದು ಅದು ಹೊಗೆ ಉಗುಳುತ್ತಿದೆ, ಅದರ ತಲೆಯ ಮೇಲೆ ಫಿರಂಗಿಯೊಂದಿದೆ. ಅದು ಧರಿಸಿರುವ ಪದಕದ ಮೇಲೆ ತಲೆಬುರುಡೆಯ ಚಿತ್ರವಿದೆ, ಕೈಯಲ್ಲಿ ರಕ್ತಸಿಕ್ತ ಕತ್ತಿಯಿದೆ... ಈ ಚಿತ್ರವನ್ನು ‘ನಾಗರಿಕತೆಯ ಮುನ್ನಡೆ’ ಎಂದು ಕರೆಯಲಾಗಿದೆ. ಈ ವಿವರಗಳನ್ನು ಓದುವ ಯಾರೇ ಆಗಲಿ ಅವರು ಖಿನ್ನರಾಗದಿರಲು ಸಾಧ್ಯವಿಲ್ಲ. ಪಾಶ್ಚಿಮಾತ್ಯ ನಾಗರಿಕತೆ ಎಷ್ಟು ಕ್ರೂರವೆಂಬುದು ಹಾಗೂ ಈ ವ್ಯಂಗ್ಯಚಿತ್ರದಲ್ಲಿನ ವ್ಯಕ್ತಿಯ ಮುಖ ಚಹರೆಗಿಂತಾ ಕ್ರೂರವೆಂಬುದು ನಮ್ಮ ಅರಿವಿಗೆ ಬರದೇ ಇರುವುದಿಲ್ಲ.... ಈ ವ್ಯಂಗ್ಯಚಿತ್ರದ ಬಗೆಗೆ ನಮ್ಮ ಓದುಗರ ಗಮನ ಸೆಳೆಯುತ್ತಾ ಅವರಿಗೆ ಸತ್ಯಾಗ್ರಹವೆಂಬ ದೈವಿಕ ಜ್ಯೋತಿಯ ಪರಿಚಯ ಮಾಡಿಸಲು ಬಯಸುತ್ತೇವೆ. ನಾಗರಿಕತೆಯ ಅರ್ಥ ನೀಡುವ ಮೇಲಿನ ಚಿತ್ರ ನೋಡಿ, ಸಂಪತ್ತು ಹಾಗೂ ಪ್ರಾಪಂಚಿಕ ಸುಖಗಳನ್ನು ಪಡೆಯಲು ದುರಾಸೆಯಿಂದ ನಿಂತಿರುವ ಹಸಿದ ತೋಳದಂತಹ ಭಯಂಕರ ರೂಪ. ಮತ್ತೊಂದೆಡೆ ನೋಡಿ, ಸತ್ಯಾಗ್ರಹಿಯೊಬ್ಬ ಸತ್ಯಕ್ಕೆ ನಿಷ್ಠನಾಗಿ, ಅಧ್ಯಾತ್ಮವೇ ತನ್ನ ಸ್ವರೂಪವಾಗಿ ದೇವರ ಆಜ್ಞೆಯನ್ನು ಶ್ರದ್ಧೆಯಿಂದ ಅನುಸರಿಸಲು ಕ್ರೂರಿಗಳ ಹೊಡೆತಕ್ಕೆ, ಯಾತನೆಗೆ ಧೃತಿಗೆಡದೆ ಎದೆಯೊಡ್ಡಿ, ಮುಖದಲ್ಲಿ ಮುಗುಳ್ನಗೆ ಮಾಸದೆ, ಒಂದು ಹನಿ ಕಣ್ಣೀರೂ ಸುರಿಸದೆ ನಿಂತಿದ್ದಾನೆ. ಈ ಎರಡೂ ಚಿತ್ರಗಳಲ್ಲಿ ಓದುಗರು ಯಾವುದಕ್ಕೆ ಆಕರ್ಷಿತರಾಗುತ್ತಾರೆ? ಸತ್ಯಾಗ್ರಹಿಯ ಚಿತ್ರ ಮನುಕುಲದ ಹೃದಯ ತಟ್ಟುತ್ತದೆ ಹಾಗೂ ಆತನ ಯಾತನೆ ಹೆಚ್ಚಾದಂತೆ ಅದರ ಪರಿಣಾಮವೂ ಹೆಚ್ಚು ಗಾಢವಾಗುತ್ತದೆನ್ನುವುದರ ಬಗೆಗೆ ನಮ್ಮ ಸಂಶಯವಿಲ್ಲ. ಈ ವ್ಯಂಗ್ಯಚಿತ್ರವನ್ನು ನೋಡುವ ಯಾರಲ್ಲೇ ಆಗಲಿ, ಆತನ ಹೃದಯದಲ್ಲಿ ಸತ್ಯಾಗ್ರಹ ಮಾತ್ರವೇ ಮನುಕುಲಕ್ಕೆ ಸ್ವಾತಂತ್ರ ಮತ್ತು ಶಕ್ತಿಯನ್ನು ತಂದುಕೊಡುತ್ತದೆ ಎನ್ನುವ ಭಾವನೆ ಬರದಿರಲು ಸಾಧ್ಯವಿಲ್ಲ ಅಲ್ಲವೆ?

 ಆ ಪತ್ರಿಕೆಯಲ್ಲಿ ಸತ್ಯಾಗ್ರಹಿಯ ಚಿತ್ರವಿಲ್ಲದಿದ್ದರೂ ಅದನ್ನು ಕಲ್ಪಿಸಿಕೊಳ್ಳುವ ಜವಾಬ್ದಾರಿ ಓದುಗನಿಗೇ ಬಿಟ್ಟಿದ್ದರು. ಇಲ್ಲಿ ಗಾಂಧಿ ಮತ್ತೊಂದು ಕಾರ್ಯನೀತಿ ಅನುಸರಿಸಿದರು. ಇಂಗ್ಲಿಷ್‌ನಲ್ಲಿ ಅಂತಹ ವ್ಯಂಗ್ಯಚಿತ್ರಗಳ ವ್ಯಾಖ್ಯಾನವನ್ನು ಸಂಕ್ಷಿಪ್ತವಾಗಿ ನೀಡಿದ್ದರೆ ಗುಜರಾತಿ ಭಾಷೆಯಲ್ಲಿ ಅವುಗಳ ವ್ಯಾಖ್ಯಾನ ದೀರ್ಘ ಹಾಗೂ ಪ್ರಚೋದನಾಕಾರಿಯಾಗಿರುತ್ತಿತ್ತು. ಇಂಗ್ಲಿಷ್ ಓದುವ ಬ್ರಿಟಿಷರಿಗೆ ಇತರ ಭಾಷೆಗಳಲ್ಲೇನಿದೆ ಎನ್ನುವುದು ತಿಳಿಯುತ್ತಿರಲಿಲ್ಲ. ವ್ಯಂಗ್ಯಚಿತ್ರಗಳ ಮೂಲಕ ಓದುಗರು ಬಿಳಿಯರ ಮನಸ್ಸಿನೊಳಗೆ ಇಣುಕಿನೋಡುವಂತೆ ಸೂಚಿಸುತ್ತಿದ್ದರು. ಗಾಂಧಿ ಈ ವ್ಯಾಖ್ಯಾನಗಳ ಮೂಲಕ ವ್ಯಂಗ್ಯಚಿತ್ರವೆನ್ನುವುದು ಒಂದು ರಾಜಕೀಯ ಕ್ರಿಯೆ ಹಾಗೂ ಓದುಗರು ಅವುಗಳ ಬಗೆಗೆ ಗಮನ ಹರಿಸಬೇಕು ಎನ್ನುವುದನ್ನು ಸೂಚಿಸುತ್ತಿರುವಂತೆ ಆಧುನಿಕ ನಾಗರಿಕತೆಯ ವಿರುದ್ಧ ಸತ್ಯಾಗ್ರಹವನ್ನು ತನ್ಮೂಲಕ ಪಶ್ಚಿಮದ ವಿರುದ್ಧ ಪೂರ್ವವನ್ನು ನಿಲ್ಲಿಸುವ ಪ್ರಯತ್ನವನ್ನೂ ಮಾಡುತ್ತಿದ್ದರು.

ಆ ಸಮಯದಲ್ಲಿಯೇ ಮೊತ್ತಮೊದಲಿಗೆ ಗಾಂಧಿ ವ್ಯಂಗ್ಯಚಿತ್ರಗಳ ವಸ್ತುವೂ ಆಗತೊಡಗಿದರು. ಅವರ ಸತ್ಯಾಗ್ರಹ ಅಸಹಕಾರ ಪ್ರತಿರೋಧ ಹೆಚ್ಚು ಹೆಚ್ಚು ಪ್ರಬಲ ಅಸ್ತ್ರವಾಗತೊಡಗಿತು ಹಾಗೂ ಅವರ ಈ ಪ್ರತಿಭಟನೆಯ ವಿಧಾನವೂ ವ್ಯಂಗ್ಯಚಿತ್ರಗಳ ವಸ್ತುವಾಗತೊಡಗಿದವು. 1906ರಲ್ಲಿ ದಕ್ಷಿಣ ಆಫ್ರಿಕಾದ ಟ್ರಾನ್ಸ್‌ವಾಲವನ್ನು ತನ್ನ ಸ್ವ-ಆಳ್ವಿಕೆಯ ವಸಾಹತನ್ನಾಗಿ ಮಾಡಿಕೊಂಡಿತು ಹಾಗೂ ಆ ಸರಕಾರದ ಮುಖ್ಯಸ್ಥರಾದ ಜನರಲ್ ಬೋಥಾ ಮತ್ತು ಜನರಲ್ ಸ್ಮಟ್ಸ್ ಅಲ್ಲಿಗೆ ಭಾರತೀಯರನ್ನು ಮತ್ತು ಇತರ ಏಶ್ಯನ್ನರನ್ನು ಬರದಂತೆ ತಡೆಯುವ ಕಾಯ್ದೆಯನ್ನು ತರಲು ಪ್ರಯತ್ನಿಸಿದಾಗ ಗಾಂಧಿ ಸತ್ಯಾಗ್ರಹ ಹೂಡಿ ಪ್ರತಿಭಟಿಸಿದರು. ಆ ಪ್ರತಿಭಟನೆಯು ಇಂಗ್ಲೆಂಡಿನ ‘ಸಂಡೇ ಟೈಮ್ಸ್’ನಲ್ಲಿ ಒಂದು ವ್ಯಂಗ್ಯಚಿತ್ರವಾಗಿ ಪ್ರಕಟವಾಯಿತು. ಭಾರತೀಯ ಸಮುದಾಯವು ಆನೆಯಂತಿದ್ದು ಅದರ ಮಾವುತ ಗಾಂಧಿಯಾಗಿದ್ದರು ಹಾಗೂ ಜನರಲ್ ಸ್ಮಟ್ಸ್ ಪ್ರವೇಶ ನಿರ್ಬಂಧ ಕಾಯ್ದೆಯಾಗಿರುವ ಸ್ಟೀಮ್ ರೋಲರ್ ಮೂಲಕ ಭಾರತೀಯ ಸಮುದಾಯವನ್ನು ನೆಲಸಮ ಮಾಡಲು ಹೊರಟಿರುವ ಚಿತ್ರ ಅದಾಗಿತ್ತು. ಆ ಚಿತ್ರದಲ್ಲಿ ಹಿಂದಿನಿಂದ ರೋಲರ್ ಗುದ್ದುತ್ತಿದ್ದರೆ ‘ಕಚಗುಳಿ ಇಡಬೇಡ ಜಾನ್’ ಎಂದು ಆನೆ ಸ್ಮಟ್ಸ್‌ಗೆ ಹೇಳುತ್ತಿತ್ತು. ಅದೇ ವ್ಯಂಗ್ಯಚಿತ್ರವನ್ನು ಗಾಂಧಿ ‘ಇಂಡಿಯನ್ ಒಪೀನಿಯನ್’ನಲ್ಲಿ ತಮ್ಮ ವ್ಯಾಖ್ಯಾನದೊಂದಿಗೆ ಮರುಮುದ್ರಿಸಿದರು. ‘ಸಂಡೇ ಟೈಮ್ಸ್’ ನ ಸಂಪಾದಕರು ಭಾರತೀಯರ ವಿರೋಧವಾಗಿದ್ದರೂ ಸಹ ಅವರ ವ್ಯಂಗ್ಯಚಿತ್ರಕಾರ ನಮ್ಮ ಹೋರಾಟಕ್ಕೆ ಅದ್ಭುತ ಬೆಂಬಲ ನೀಡುತ್ತಿದ್ದಾನೆ ಎಂದು ತಮ್ಮ ವ್ಯಾಖ್ಯಾನದಲ್ಲಿ ಬರೆದಿದ್ದರು.

ದಕ್ಷಿಣ ಆಫ್ರಿಕಾದಲ್ಲಿ ಗಾಂಧಿ 1893ರಿಂದ 1914ರವರೆಗೆ ಕಳೆದ ಪ್ರತಿಭಟನೆಯ ಹೋರಾಟದ ಅವಧಿಯಲ್ಲಿ ಅವರ ಕುರಿತು ಹಲವಾರು ವ್ಯಂಗ್ಯಚಿತ್ರಗಳು ಪ್ರಕಟವಾದವು. ಟ್ರಾನ್ಸ್ ವಾಲ್‌ನ ವಲಸೆ ನಿರ್ಬಂಧ ಕಾನೂನಿನ ಫಲವಾಗಿ ಹಲವಾರು ಭಾರತೀಯ ಮತ್ತು ಏಶ್ಯಾದ ಸಣ್ಣ ಪುಟ್ಟ ವ್ಯಾಪಾರಿಗಳು ತೀವ್ರ ನಷ್ಟ ಹೊಂದಿದರು. ಆಗ ಗಾಂಧಿಯ ಸತ್ಯಾಗ್ರಹದ ಭಾಗವಾಗಿ ಆ ಸಣ್ಣ ವ್ಯಾಪಾರಿಗಳೆಲ್ಲಾ ಪರ್ಮಿಟ್ ಇಲ್ಲದೆ ರಸ್ತೆ ಬದಿ ವಸ್ತು ಗಳನ್ನು ಮಾರಾಟ ಮಾಡತೊಡಗಿದರು. ಆಗ ಬ್ರಿಟನ್ನಿನ ‘ದ ಸ್ಟಾರ್’ ಪತ್ರಿಕೆಯಲ್ಲಿ ಪ್ರಕಟವಾದ ವ್ಯಂಗ್ಯಚಿತ್ರದಲ್ಲಿ ದೈತ್ಯಾಕಾರರಂತೆ ನಿಂತಿರುವ ಜನರಲ್ ಬೋಥಾ ಮತ್ತು ಇತರ ಬೋಯರ್ ನಾಯಕರ ಎದುರು ಕುಬ್ಜ ಗಾಂಧಿ ಎದೆಸೆಟೆಸಿ ನಿಂತು ಸಣ್ಣ ಪುಟ್ಟ ವ್ಯಾಪಾರಿಗಳನ್ನು ಅರೆಸ್ಟ್ ಮಾಡುವ ಬದಲು ನನ್ನನ್ನು ಅರೆಸ್ಟ್ ಮಾಡಿ ಎಂದು ಹೇಳುತ್ತಿದ್ದಾರೆ. 1907ರಲ್ಲಿ ದಕ್ಷಿಣ ಆಫ್ರಿಕಾದ ‘ರ್ಯಾಂಡ್ ಡೈಲಿ ಮೇಲ್’ನಲ್ಲಿ ಪ್ರಕಟವಾದ ವ್ಯಂಗ್ಯಚಿತ್ರವೊಂದು ಗಾಂಧಿಯ ವ್ಯಕ್ತಿತ್ವ ಪ್ರದರ್ಶಿಸುವ ಮಾರ್ಮಿಕ ಚಿತ್ರವಾಗಿದ್ದು ಅದರಲ್ಲಿ ಏಷಿಯಾಟಿಕ್ ಸುಗ್ರೀವಾಜ್ಞೆಯ ಪಿಸ್ತೂಲು ಹೊಂದಿರುವ ಸರಕಾರಕ್ಕೆ ಅತ್ಯಂತ ತಾಳ್ಮೆಯಿಂದ ನಿಂತಿರುವ ಗಾಂಧಿ ಕಣ್ಣುಮುಚ್ಚಿಕೊಂಡು ಗುಂಡು ನನ್ನ ಎದೆಗೇ ಹಾರಿಸು ಎಂದು ಹೇಳುವಂತೆ ಎದೆಯ ಮೇಲೆ ಕೈ ಇಟ್ಟುಕೊಂಡಿದ್ದಾರೆ ಆದರೆ ಗುಂಡು ಹಾರಿಸಲು ಹೊರಟ ಸರಕಾರ ತಬ್ಬಿಬ್ಬಾಗಿ ಪಿಸ್ತೂಲು ನೆಲಕ್ಕೆ ಬಾಗಿಸಿ ನಿಂತಿದೆ.

 ಭಾರತದಲ್ಲಿ ಗಾಂಧಿಯ ಸ್ವಾತಂತ್ರ ಹೋರಾಟ ಪ್ರಾರಂಭವಾದ ನಂತರವೂ ಗಾಂಧಿಯ ಕುರಿತಾದ ನೂರಾರು ವ್ಯಂಗ್ಯಚಿತ್ರಗಳು ಪ್ರಕಟವಾದವು. ಗಾಂಧಿ 1931ರಲ್ಲಿ ಬ್ರಿಟನ್‌ಗೆ ಎರಡನೇ ದುಂಡು ಮೇಜಿನ ಪರಿಷತ್ತಿಗೆ ಹೋದರು. ಅಷ್ಟೊತ್ತಿಗೆ ಗಾಂಧಿ ‘ಮಹಾತ್ಮ’ನಾಗಿ ಜಗತ್ಪ್ರಸಿದ್ಧರಾಗಿದ್ದರು. ಆಗ ಲಂಡನ್ನಿನಲ್ಲಿ ಚಾರ್ಲ್ಸ್‌ಚಾಪ್ಲಿನ್ ಮತ್ತು ಖ್ಯಾತ ವ್ಯಂಗ್ಯಚಿತ್ರಕಾರ ಡೇವಿಡ್ ಲೋರವರನ್ನು ಭೇಟಿಯಾದರು. ಗಾಂಧಿ ಡೇವಿಡ್ ಲೋರವರ ವ್ಯಂಗ್ಯಚಿತ್ರಗಳ ಅತ್ಯುತ್ತಮ ವಸ್ತುವಾಗಿದ್ದರು. ಗಾಂಧಿಯನ್ನು ಸಂದರ್ಶಿಸಲು ಭಾರತಕ್ಕೆ ಸಹ ಭೇಟಿ ನೀಡಿದ್ದರು. ಒಮ್ಮೆ ಸಂದರ್ಶನ ಮಾಡಿ ಮುಗಿಸಿದಾಗ ಗಾಂಧಿ ತಮ್ಮ ಮೇಕೆಗೆ ಮೇವು ಹಾಕುವಾಗ ತಮಾಷೆಗಾಗಿ ‘‘ನನ್ನ ಮೇಕೆಯನ್ನೂ ಸಂದರ್ಶನ ಮಾಡುವಿರಾ ಲೋ?’’ ಎಂದು ಕೇಳಿದರು.

ಗಾಂಧಿಯ ಮೇಕೆಯ ಹಾಲಿನ ಸೇವನೆ ಇಂಗ್ಲೆಂಡಿನಲ್ಲೂ ಸುದ್ದಿಯಾಗಿತ್ತು. ಗಾಂಧಿಯ ಈ ಅಭ್ಯಾಸವನ್ನು ಲೇವಡಿ ಮಾಡುವವರೂ ಸಾಕಷ್ಟಿದ್ದರು. ದುಂಡು ಮೇಜಿನ ಪರಿಷತ್ತಿಗೆ ಗಾಂಧಿ ಹೊರಡಲು ಸಿದ್ಧವಾಗುತ್ತಿರುವಂತೆ ಲಂಡನ್ನಿನ ‘ಡೈಲಿ ಮೇಲ್’ನ ಪಾಯ್ ಎಂಬ ವ್ಯಂಗ್ಯಚಿತ್ರಕಾರ ಮೇಕೆಗಳೂ ತಮ್ಮನ್ನು ಲಂಡನ್ನಿಗೆ ಕರೆದೊಯ್ಯುವಂತೆ ಗಾಂಧಿಯ ದುಂಬಾಲು ಬಿದ್ದಿರುವ ವ್ಯಂಗ್ಯಚಿತ್ರ ಪ್ರಕಟಿಸಿದ. ಆ ವ್ಯಂಗ್ಯಚಿತ್ರ ಶೀರ್ಷಿಕೆ ಪದ್ಯದ ರೂಪದಲ್ಲಿದ್ದು ಅದರಲ್ಲಿ ‘‘ಹಳೆಯ ಇಂಗ್ಲೆಂಡ್ ನೋಡಲು ಕಾತುರರಾಗಿರುವ ಮೇಕೆಗಳಿಗೆ ನಿರಾಸೆ ಮಾಡಬೇಡಿ, ನೀವು ಬರಲು ಸಾಧ್ಯವಾಗದಿದ್ದರೂ ನಾವು ಮೇಕೆಗಳನ್ನು ಸ್ವಾಗತಿಸುತ್ತೇವೆ’’ ಎಂದಿತ್ತು.

ಅದೇ ರೀತಿ ಅವರು ಧರಿಸುತ್ತಿದ್ದ ವಸ್ತ್ರವೂ ವ್ಯಂಗ್ಯಚಿತ್ರಕಾರರ ವಸ್ತುವಾಗಿತ್ತು. ಅವರು ಇಂಗ್ಲೆಂಡಿಗೆ ಹೊರಡುವ ಸಮಯದಲ್ಲೇ ಅಮೆರಿಕದ ‘ಲೈಫ್’ ಪತ್ರಿಕೆಯಲ್ಲಿ ಪ್ರಕಟವಾದ ವ್ಯಂಗ್ಯಚಿತ್ರ ವೊಂದರಲ್ಲಿ ಕಸ್ಟಮ್ಸ್ ಅಧಿಕಾರಿಗಳು ಗಾಂಧಿಯ ದೊಡ್ಡ ಸೂಟ್‌ಕೇಸ್ ತಪಾಸಣೆಗೆ ತೆರೆದಾಗ ಅದರಲ್ಲಿ ಲಂಗೋಟಿ ಮಾತ್ರ ಇರುವುದನ್ನು ಕಂಡು ತಬ್ಬಿಬ್ಬಾಗಿರುತ್ತಾರೆ. ವಾಸ್ತವವಾಗಿ ಕೆಲ ದಿನಗಳ ಹಿಂದೆ ಫ್ರಾನ್ಸ್ ನ ಮಾರ್ಸೇಲ್ಸ್‌ನಲ್ಲಿ ಕಸ್ಟಮ್ಸ್‌ನವರು ಸೂಟ್‌ಕೇಸ್‌ನಲ್ಲಿ ಏನೇನಿದೆ ಘೋಷಿಸಿ ಎಂದು ಕೇಳಿದ್ದಾಗ, ‘‘ನಾನೊಬ್ಬ ಬಡ ಅಲೆಮಾರಿ. ನನ್ನೆಲ್ಲಾ ಆಸ್ತಿಯೆಂದರೆ ಆರು ಚರಕ, ಬಂದಿಖಾನೆಯ ಕೆಲವು ಪಾತ್ರೆಗಳು, ಒಂದು ಕ್ಯಾನ್ ಮೇಕೆಯ ಹಾಲು, ಆರು ಕೈಮಗ್ಗದ ಲಂಗೋಟಿಗಳು ಮತ್ತು ಟವಲ್ ಹಾಗೂ ಒಂದಷ್ಟು ಗೌರವ- ಅವೆಲ್ಲಾ ಅಷ್ಟೇನೂ ಮೌಲ್ಯಯುತವಾದುದಲ್ಲ ಬಿಡಿ’’ ಎಂದಿದ್ದರು!

ಗಾಂಧಿ ಇಂಗ್ಲೆಂಡಿನ ದುಂಡು ಮೇಜಿನ ಸಮಾವೇಶಕ್ಕೆ ಹೊರಟಾಗ ಪತ್ರಕರ್ತನೊಬ್ಬ, ‘‘ಗಾಂಧೀಜಿ, ಈ ಲಂಗೋಟಿ ಧರ�

Writer - ಡಾ.ಜೆ.ಬಾಲಕೃಷ್ಣ

contributor

Editor - ಡಾ.ಜೆ.ಬಾಲಕೃಷ್ಣ

contributor

Similar News