ಅಂಡರ್-19 ಏಶ್ಯಕಪ್: ಭಾರತ ಶುಭಾರಂಭ

Update: 2018-09-29 18:46 GMT

ಢಾಕಾ, ಸೆ.29: ಕ್ರಿಕೆಟ್ ಶಿಶು ನೇಪಾಳದ ವಿರುದ್ಧ 171 ರನ್‌ಗಳ ಅಂತರದಿಂದ ಜಯ ಸಾಸಿರುವ ಭಾರತ ತಂಡ ಅಂಡರ್-19 ಏಶ್ಯಕಪ್‌ನಲ್ಲಿ ಶುಭಾರಂಭ ಮಾಡಿದೆ. ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 104 ರನ್ ಹಾಗೂ ವಿಕೆಟ್‌ಕೀಪರ್ ಪ್ರಭು ಸಿಮ್ರಾನ್ ಸಿಂಗ್ 84 ರನ್ ನೆರವಿನಿಂದ 9 ವಿಕೆಟ್‌ಗಳ ನಷ್ಟಕ್ಕೆ 304 ರನ್ ಗಳಿಸಿತ್ತು.

8 ಬೌಂಡರಿ, 5 ಸಿಕ್ಸರ್ ಸಿಡಿಸಿದ ಜೈಸ್ವಾಲ್ ಅವರು ಸಿಮ್ರಾನ್ ಸಿಂಗ್‌ರೊಂದಿಗೆ 76 ರನ್ ಜೊತೆಯಾಟ ನಡೆಸಿ ತಂಡದ ಸ್ಕೋರನ್ನು 200ರ ಗಡಿ ದಾಟಿಸಿದರು. ಗೆಲ್ಲಲು 305 ರನ್ ಗುರಿ ಪಡೆದ ನೇಪಾಳ 36.4 ಓವರ್‌ಗಳಲ್ಲಿ 133 ರನ್‌ಗೆ ಆಲೌಟಾಯಿತು. ಸಿದ್ದಾರ್ಥ್ ದೇಸಾಯಿ(19ಕ್ಕೆ3) ಹಾಗೂ ಹರ್ಷ ತ್ಯಾಗಿ(21ಕ್ಕೆ3) ತಲಾ 3 ವಿಕೆಟ್ ಕಬಳಿಸಿದರು. ಯಶಸ್ವಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News