ಸ್ವರ್ಣಭಾರತಿ ಬ್ಯಾಂಕ್‌ನಿಂದ ಸಿಎಂ ಪರಿಹಾರ ನಿಧಿಗೆ 3.50 ಲಕ್ಷ ರೂ.ದೇಣಿಗೆ

Update: 2018-09-30 13:22 GMT

ಬೆಂಗಳೂರು, ಸೆ.30: ಅತಿವೃಷ್ಟಿಯಿಂದ ಹಾನಿಗೊಳಗಾಗಿ ನಿರಾಶ್ರಿತರಾಗಿರುವ ಕೊಡಗು ಜಿಲ್ಲೆಯ ಸಂತ್ರಸ್ತರಿಗೆ ನೆರವನ್ನು ನೀಡಲು ಸ್ವರ್ಣ ಭಾರತಿ ಸಹಕಾರ ಬ್ಯಾಂಕ್ ವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 3.50 ಲಕ್ಷ ರೂ. ದೇಣಿಗೆಯನ್ನು ನೀಡಿದ್ದಾರೆ.

ಸ್ವರ್ಣ ಭಾರತಿ ಸಹಕಾರ ಬ್ಯಾಂಕ್ ನಿ. ಬೆಂಗಳೂರು ವತಿಯಿಂದ ಮತ್ತು ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ಬ್ಯಾಂಕಿನ ಸಿಬ್ಬಂದಿ ವರ್ಗದವರ ಒಂದು ದಿನದ ವೇತನ ಸೇರಿ ಒಟ್ಟು ಮೊತ್ತ 3,50,000 ರೂ. ಗಳನ್ನು ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ಸೆ.25ರ ಪೇ ಆರ್ಡರ್ ಸಂಖ್ಯೆ 023376 ಮುಖಾಂತರ ನೀಡಲಾಯಿತು. ಬ್ಯಾಂಕಿನ ಆಡಳಿತ ಮಂಡಳಿಯ ಪರವಾಗಿ ಅಧ್ಯಕ್ಷ ಪಿ.ಎಲ್.ವೆಂಕಟರಾಮರೆಡ್ಡಿ, ನಿರ್ದೇಶಕ ಜಿ.ಎಂ.ರವೀಂದ್ರ ಹಾಗೂ ಬ್ಯಾಂಕ್ ಸಿಬ್ಬಂದಿಗಳ ಪರವಾಗಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿ.ಕೃಷ್ಣಮೂರ್ತಿಯವರು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ರವರ ಸಮ್ಮುಖದಲ್ಲಿ ದೇಣಿಗೆ ಮೊತ್ತ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News