ಮಾದವ ವಸ್ತು ಮಾರಾಟ: ಮೂವರ ಸೆರೆ
Update: 2018-09-30 19:09 IST
ಬೆಂಗಳೂರು, ಸೆ.30: ಮಾದಕ ವಸ್ತುಗಳ ಮಾರಾಟ ಆರೋಪದಡಿ ಇಲ್ಲಿನ ಕೋರಮಂಗಲ ಠಾಣಾ ಪೊಲೀಸರು ಮೂವರನ್ನು ಬಂಧಿಸಿ, ವಿಚಾರಣೆ ಗೊಳಪಡಿಸಿದ್ದಾರೆ.
ನಗರದ ನಿವಾಸಿಗಳಾದ ಅಮಾನುಲ್ಲಾ, ಶ್ರೀನಿವಾಸ್ ಹಾಗೂ ಶಿವಕುಮಾರ್ ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರಿಂದ ಬರೋಬ್ಬರಿ 6 ಕೆ.ಜಿ.ಗಾಂಜಾ , ಆಟೊ ರಿಕ್ಷಾ ಹಾಗೂ ಮೊಬೈಲ್ ಜಪ್ತಿ ಮಾಡಿದ್ದಾರೆ. ಬಂಧಿತ ಆರೋಪಿಗಳ ಪೈಕಿ ಶ್ರೀನಿವಾಸ್ ಈ ಹಿಂದೆ ಕೋರಮಂಗಲ ಪೊಲೀಸರು ಬಂಧಿಸಿ ಈತನಿಂದ 26 ಕೆ.ಜಿ.ಗಾಂಜಾವನ್ನು ಜಪ್ತಿ ಮಾಡಿ ಜೈಲಿಗೆ ಕಳುಹಿಸಿದ್ದರು. ಬಳಿಕ ಜೈಲಿನಿಂದ ಬಿಡುಗಡೆಗೊಂಡು ಸಹಚರರೊಂದಿಗೆ ಮತ್ತೆ ಗಾಂಜಾ ಮಾರಾಟ ಕೃತ್ಯ ಕೈಹಾಕಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
ಆರೋಪಿ ಶ್ರೀನಿವಾಸ್ ಮೇಲೆ ಕೋರಮಂಗಲ, ಕೋಡಿಗೆಹಳ್ಳಿ, ವಿಜಯನಗರ, ಮೈಸೂರಿನ ಕುವೆಂಪು ನಗರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.