ಲೇಖಕರು, ಪ್ರಕಾಶಕರು, ಯುವ ಲೇಖಕರ ಪ್ರಶಸ್ತಿಗೆ ಅರ್ಜಿ ಆಹ್ವಾನ
Update: 2018-09-30 19:16 IST
ಬೆಂಗಳೂರು, ಸೆ.30: ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ವತಿಯಿಂದ ಲೇಖಕರು, ಪ್ರಕಾಶಕರು ಹಾಗೂ ಯುವ ಲೇಖಕರ ಪ್ರಶಸ್ತಿ ನೀಡುತ್ತಿದ್ದು, 2017ನೆ ಸಾಲಿನಲ್ಲಿ ಪ್ರಕಟವಾಗಿರುವ ಎಲ್ಲ ಪ್ರಕಾರದ ಕೃತಿಗಳಿಗೆ ಅರ್ಜಿ ಆಹ್ವಾನಿಸಿದೆ.
ಲೇಖಕರು ತಮ್ಮ ಪ್ರಕಟಿತ ಪುಸ್ತಕಗಳು ಹಾಗೂ ಕಿರುಪರಿಚಯವನ್ನು ಅ.20ರೊಳಗೆ ನಿಡಸಾಲೆ ಪುಟ್ಟಸ್ವಾಮಯ್ಯ, ನಂ40, ಸುಗ್ಗಿ, 1ನೆ ಮುಖ್ಯ ರಸ್ತೆ, 3ನೆ ವಿಭಾಗ, 2ನೆ ಹಂತ ನಾಗರಭಾವಿ ಬೆಂಗಳೂರು-72 ವಿಳಾಸಕ್ಕೆ ಕಳುಹಿಸಲು ಪ್ರಕಟನೆ ತಿಳಿಸಿದೆ.