ಯುವತಿಗೆ ಅತ್ಯಾಚಾರ ಬೆದರಿಕೆ: ಆರೋಪಿ ಬಂಧನ

Update: 2018-09-30 15:35 GMT

ಬೆಂಗಳೂರು, ಸೆ.30: ಇಲ್ಲಿನ ತಿಲಕ್‌ನಗರದ ಬಳಿಯ ಸಿಗ್ನಲ್‌ನಲ್ಲಿ ಅತ್ಯಾಚಾರ ಮಾಡುವುದಾಗಿ ಯುವತಿಗೆ ಬೆದರಿಕೆ ಹಾಕಿದ್ದ ಆರೋಪಿಯನ್ನು ತಿಲಕ್‌ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ನಗರದ ನಿವಾಸಿ ಚಂದ್ರಶೇಖರ್(43) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರು ಚಲಾಯಿಸುತ್ತಿದ್ದ ಯುವತಿ, ತಿಲಕ್‌ನಗರದ ಬಿಲಾಲ್ ಮಸೀದಿ ಬಳಿ ಸಿಗ್ನಲ್ ಬಿದ್ದಿದ್ದರಿಂದ ನಿಲ್ಲಿಸಿದ್ದಾರೆ. ಹಿಂಬದಿ ಬೈಕ್ ಸವಾರ ಶಬ್ದ ಮಾಡಿ ಸಿಗ್ನಲ್ ಜಂಪ್ ಮಾಡುವಂತೆ ಕೂಗಿದ್ದಾನೆ. ಇದಕ್ಕೆ ನಿರಾಕರಿಸಿದ ಯುವತಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ ಎನ್ನಲಾಗಿದೆ.

ಜೊತೆಗೆ ಯುವತಿಯ ಕಾರನ್ನು ಹಿಂಬಾಲಿಸಿಕೊಂಡು ಹೋಗಿ, ಬೈಕ್‌ನಿಂದ ಅಡ್ಡಗಟ್ಟಿ ಅತ್ಯಾಚಾರ ಮಾಡುವುದಾಗಿ ಬೆದರಿಸಿದ್ದಾನೆ. ಕೂಡಲೆ ಯುವತಿಯು ತನ್ನ ಕ್ಯಾಮೆರಾದಿಂದ ಆರೋಪಿಯ ಫೀಟೋ ಮತ್ತು ಬೈಕ್ ಫೋಟೊ ಸೆರೆ ಹಿಡಿದಿದ್ದಾಳೆ. ಈ ಸಂಬಂಧ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ವಿಚಾರಣೆ ಗೊಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News