×
Ad

ನಕಲಿ ವೈರ್‌ಗಳ ಮಾರಾಟ: ಸಾವಿರಾರು ರೂ.ಮೌಲ್ಯದ ವೈರ್ ಜಪ್ತಿ

Update: 2018-09-30 21:21 IST

ಬೆಂಗಳೂರು, ಸೆ.30: ಫಿನೋಲೆಕ್ಸ್ ಕಂಪೆನಿಯ ಹೆಸರಿನಲ್ಲಿ ನಕಲಿ ವೈರುಗಳನ್ನು ಮಾರಾಟ ಮಾಡುತ್ತಿದ್ದ ಆರೋಪದಡಿ ಪವನ್ ಎಲೆಕ್ಟ್ರಿಕಲ್ ಅಂಗಡಿಯ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ಮಾಲಕನನ್ನು ಬಂಧಿಸಿ, ಸಾವಿರಾರು ರೂಪಾಯಿ ಮೌಲ್ಯದ ವೈರ್‌ಗಳನ್ನು ಜಪ್ತಿ ಮಾಡಿದ್ದಾರೆ.

ನಗರದ ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿರುವ ಪವನ್ ಎಲೆಕ್ಟ್ರಿಕಲ್ಸ್ ಎಂಬ ಹೆಸರಿನ ಅಂಗಡಿ ಮೇಲೆ ದಾಳಿ ನಡೆಸಿ, ಮಾಲಕ ಗಣಪತ್ ರಾಜ್ ಎಂಬಾತನನ್ನು ವಶಕ್ಕೆ ಪಡೆದು, 48 ಸಾವಿರ ರೂ.ಮೌಲ್ಯದ 18 ಬಾಕ್ಸ್ ನಕಲಿ ಫಿನೋಲೆಕ್ಸ್ ವೈರುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ಆರೋಪಿ ವಿರುದ್ಧ ಇಲ್ಲಿನ ಕೆ.ಆರ್.ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News