ಬೆಂಗಳೂರು: ಕ್ಲಬ್ ಮೇಲೆ ಸಿಸಿಬಿ ದಾಳಿ; 43 ಜನರ ಸೆರೆ, 18.92 ಲಕ್ಷ ನಗದು ಜಪ್ತಿ
Update: 2018-09-30 21:51 IST
ಬೆಂಗಳೂರು, ಸೆ.30: ನಗರದ ವಿಲ್ಸನ್ ಗಾರ್ಡನ್ ಕ್ಲಬ್‌ನ ಮೇಲೆ ಸಿಸಿಬಿ ಪೊಲೀಸರು ದಾಲಿ ನಡೆಸಿ 43 ಜನರನ್ನು ಬಂಧಿಸಿ 18.32 ಲಕ್ಷ ರೂ. ನಗದು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ವಿಲ್ಸನ್ ಗಾರ್ಡ್‌ನ 9ನೇ ವಿಲ್ಸನ್ ಗಾರ್ಡನ್ ಕ್ಲಬ್‌ನ ಕ್ರಾಸ್‌ನಲ್ಲಿ ಕಾನೂನು ನಿಯಮ ಉಲ್ಲಂಘಿಸಿ ಹಣ ಪಣವಾಗಿ ಕಟ್ಟಿಕೊಂಡು ಇಸ್ಪೀಟ್ ಜೂಜಾಟ ಆಡುತ್ತಿದ್ದ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಬಂದಿತ್ತು. ಈ ಆಧಾರದ ಮೇಲೆ ಕಾರ್ಯನಿರತರಾದ ಸಿಸಿಬಿ ಅಧಿಕಾರಿ ಮತ್ತು ಸಿಬ್ಬಂದಿಗಳ ವಿಶೇಷ ತಂಡಗಳು ಸೆ.29ರಂದು ಕ್ಲಬ್‌ನ ಮೇಲೆ ದಾಳಿ ನಡೆಸಿ 43 ಜನರನ್ನು ಬಂಧಿಸಿ ನಗದು ಹಾಗೂ ವಿವಿಧ ಮುಖಬೆಲೆಯ ಟೋಕನ್‌ಗಳನ್ನು ಜಪ್ತಿ ಮಾಡಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.