ದುಬೈ: ಅಂಬರ್ ಕಪ್ ಬ್ಯಾಡ್ಮಿಂಟನ್; ಬ್ಯಾರೀಸ್ ಸ್ಪೋರ್ಟ್ ಪ್ರಮೋಟರ್ಸ್ ರನ್ನರ್ ಅಪ್

Update: 2018-10-01 13:33 GMT

ದುಬೈ, ಅ. 1: ಇಲ್ಲಿನ ಅಲ್ ರಾಶಿದಿಯದಲ್ಲಿ ನಡೆದ ಅಂಬರ್ ಕಪ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ನಲ್ಲಿ ಮಂಗಳೂರಿನ ಬ್ಯಾರೀಸ್ ಸ್ಪೋರ್ಟ್ ಪ್ರಮೋಟರ್ಸ್ ತಂಡವು ದ್ವಿತೀಯ ಸ್ಥಾನ ಗಳಿಸಿದೆ.

ಈ ತಂಡದಲ್ಲಿ ನೂರ್ ಮುಹಮ್ಮದ್, ಎಕೆ ನಿಯಾಝ್, ಶಹನವಾಝ್, ರಿಯಾಝ್ ಎ.ಎಚ್., ರಿಝ್ವಾನ್ ಸುಳ್ಯ, ಖಲೀಲುರ್ರಹ್ಮಾನ್ ಎಂ.ಎಚ್., ಮುಹಮ್ಮದ್ ಶಮೀರ್ ಪುತ್ತೂರು, ಫಝ್ಲಿ, ಅಬ್ದುಲ್ ಸಮದ್, ರಹ್ಮತುಲ್ಲಾ ಅವರು ಭಾಗವಹಿಸಿದ್ದರು.

ಅಂಬರ್ ಕಪ್ ನ ಬಹುಮಾನ ವಿತರಣೆಯನ್ನು ಸಾಲಿಮ್ ಹಸನ್ ಉಬೈದ್ ನೆರವೇರಿಸಿದರು.

ಈ ಕಾರ್ಯಕ್ರಮದಲ್ಲಿ ಅಂಬರ್ ಗ್ರೂಪ್ ನಿರ್ದೇಶಕ ಯೂಸುಪ್ ಕೆ.ಎಲ್.ಪಿ., ಅಲಿ ಮತ್ತು ಇಸ್ಮಾಯೀಲ್ ಅವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News