ಜಾಹೀರಾತು ತಡೆಗೆ ಸರಕಾರದಿಂದ ಗೆಜೆಟ್ ಪ್ರಕಟ

Update: 2018-10-01 17:00 GMT

ಬೆಂಗಳೂರು, ಅ.1: ಬಿಬಿಎಂಪಿ ವ್ಯಾಪ್ತಿಯಲ್ಲಿ ಜಾಹೀರಾತು ನಿಷೇಧದ ಹಿನ್ನೆಲೆಯಲ್ಲಿ ಕೆಎಂಸಿ ಕಾಯ್ದೆ-1976ಕ್ಕೆ ಕರಡು ಜಾಹೀರಾತು ಬೈಲಾ ಉಪವಿಧಿಗಳನ್ನು ಒಪ್ಪಿ ಸರಕಾರ ಗೆಜೆಟ್ ಪ್ರಕಟನೆ ಹೊರಡಿಸಿದೆ.

ಸರಕಾರ ಹೊರಡಿಸಿರುವ ಗೆಜೆಟ್ ಪ್ರಕಟನೆಗೆ ಸಾರ್ವಜನಿಕರ ವಿರೋಧ, ಸಲಹೆ, ಸೂಚನೆಗಳಿದ್ದರೆ ಅ.24ರೊಳಗೆ ಸಲ್ಲಿಸಬಹುದಾಗಿದೆ. ಜಾಹೀರಾತು ನಿಷೇಧದ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳು ಸೇರಿದಂತೆ 13 ಸ್ಥಳಗಳಲ್ಲಿ ಜಾಹೀರಾತು ಪ್ರದರ್ಶಿಸುವಂತಿಲ್ಲ.

ಕೆರೆಗಳು, ಮರಗಳು, ಮಳೆನೀರುಗಾಲುವೆ ಸ್ಥಳಗಳು, ಸ್ಮಶಾನದ ಕಂಬಗಳು ಮತ್ತು ಗೋಡೆಗಳ ಮೇಲೆ ಬರಹಗಳನ್ನು ನಿಷೇಧ ಮಾಡಲಾಗಿದೆ. ಹೊಸ ಬೈಲಾದ ಅನುಗುಣವಾಗಿ ಜಾಹೀರಾತು ಪ್ರದರ್ಶನಗಳನ್ನು ನೋಟಿಸ್ ಇಲ್ಲದೆ ತೆರವು ಮಾಡಬಹುದಾಗಿದೆ. ಮಾಲಕರ ಒಪ್ಪಿಗೆ ಇಲ್ಲದೆ ಖಾಸಗಿ ಕಟ್ಟಡಗಳ ಮೇಲೆ ಜಾಹೀರಾತು ಪ್ರದರ್ಶಿಸುವಂತಿಲ್ಲ. ಕರಡು ಜಾಹೀರಾತು ಬೈಲಾ ಉಪವಿಧಿಗಳಿಗೆ ಸಾರ್ವಜನಿಕರಿಂದ ಆಕ್ಷೇಪಣೆಗಳು ಇದ್ದಲ್ಲಿ ಲಿಖಿತವಾಗಿ ಬಿಬಿಎಂಪಿಗೆ ಸಲ್ಲಿಸಬೇಕಾಗಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News