ಬೆಂಗಳೂರು: ಸಂಶಯಾಸ್ಪದವಾಗಿದ್ದ 36 ರೌಡಿಗಳನ್ನು ವಶಕ್ಕೆ ಪಡೆದ ಸಿಸಿಬಿ ಪೊಲೀಸರು
Update: 2018-10-01 22:49 IST
ಬೆಂಗಳೂರು, ಅ.1: ಮದ್ಯದಂಗಡಿ, ರೆಸ್ಟೋರೆಂಟ್‌ಗಳಲ್ಲಿ ಸಂಶಯಾಸ್ಪದವಾಗಿದ್ದ 36 ರೌಡಿಗಳನ್ನು ವಶಕ್ಕೆ ಪಡೆದ ಸಿಸಿಬಿ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.
ನಗರದಲ್ಲಿ ರೌಡಿ ಚಟುವಟಿಕೆಗಳನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಕಾರ್ಯ ನಿರತರಾಗಿದ್ದ ಸಿಸಿಬಿ ಪೊಲೀಸರು, ರಾಜಾಜಿನಗರದ ಪೊಲೀಸ್ ಠಾಣಾ ವ್ಯಾಪ್ತಿಯ ನವರಂಗ್ ಬಾರ್, ಮಾಗಡಿರೋಡ್ ಠಾಣಾ ವ್ಯಾಪ್ತಿಯ ಕಾಕ್‌ಟೈಲ್ ಬಾರ್ ರೆಸ್ಟೋರೆಂಟ್ ಮತ್ತು ಕಾರ್ತಿಕ್ ಬಾರ್ ಮತ್ತು ಹನುಮಂತನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬ್ಲೂ ವಿಂಗ್ಸ್ ಬಾರ್ ರೆಸ್ಟೋರೆಂಟ್‌ಗಳಲ್ಲಿ ಸಂಶಯಾಸ್ಪದವಾಗಿದ್ದ ರೌಡಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.