×
Ad

ನ್ಯಾಯಾಧೀಶರ ವರ್ಗಾವಣೆ ಅಹವಾಲುಗಳನ್ನು ರಿಜಿಸ್ಟ್ರಾರ್ ಜನರಲ್‌ಗೆ ಸಲ್ಲಿಸುವಂತಿಲ್ಲ: ಹೈಕೋರ್ಟ್

Update: 2018-10-02 22:43 IST

ಬೆಂಗಳೂರು, ಅ.2: ಅಧೀನ ನ್ಯಾಯಾಲಯಗಳ ನ್ಯಾಯಾಧೀಶರು ತಮ್ಮ ವರ್ಗಾವಣೆಗೆ ಸಂಬಂಧಿಸಿದ ಯಾವುದೇ ಅಹವಾಲುಗಳನ್ನು ನೇರವಾಗಿ ರಿಜಿಸ್ಟ್ರಾರ್ ಜನರಲ್ ಅವರಿಗೆ ಸಲ್ಲಿಸುವಂತಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.

ಈ ಕುರಿತಂತೆ ರಿಜಿಸ್ಟ್ರಾರ್ ಜನರಲ್ ಅಶೋಕ ಜಿ.ನಿಜಗಣ್ಣವರ ಸುತ್ತೋಲೆ ಹೊರಡಿಸಿದ್ದು, ಸಂಬಂಧಿಸಿದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಮೂಲಕವೇ ಮನವಿ ಸಲ್ಲಿಸಬೇಕು. ಒಂದು ವೇಳೆ ನೇರವಾಗಿ ರಿಜಿಸ್ಟ್ರಾರ್ ಜನರಲ್‌ಗೆ ಮನವಿ ಸಲ್ಲಿಸಿದರೆ ಅವುಗಳನ್ನು ಪುರಸ್ಕರಿಸಲಾಗದು. ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಾಕಿತು ಮಾಡಲಾಗಿದೆ.

ಸಾಮಾನ್ಯ ವರ್ಗಾವಣೆಗಳು ಮುಗಿದ ನಂತರವೂ ಕೆಲವು ನ್ಯಾಯಾಧೀಶರು ನೇರವಾಗಿ ರಿಜಿಸ್ಟ್ರಾರ್ ಜನರಲ್ ಅವರಿಗೆ ಮನವಿ ಸಲ್ಲಿಸುತ್ತಿರುವ ಪ್ರಕರಣ ಹೆಚ್ಚಾಗಿವೆ. ಆ ಹಿನ್ನೆಲೆಯಲ್ಲಿ ಇಂತಹ ಸುತ್ತೋಲೆ ಹೊರಡಿಸಲಾಗುತ್ತಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News