ರೋಹಿತ್ ನಾಯಕತ್ವಕ್ಕೆ ವಕಾರ್ ಯೂನಿಸ್ ಶ್ಲಾಘನೆ

Update: 2018-10-02 19:23 GMT

ಹೊಸದಿಲ್ಲಿ, ಅ.2: ರೋಹಿತ್ ಶರ್ಮಾ ನಾಯಕತ್ವದಿಂದ ಪ್ರಭಾವಿತರಾಗಿರುವ ಪಾಕಿಸ್ತಾನದ ಮಾಜಿ ನಾಯಕ ವಕಾರ್ ಯೂನಿಸ್, ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ರೋಹಿತ್ ಅವರು ಭಾರತ ತಂಡವನ್ನು ಮುನ್ನಡೆಸಿದ ರೀತಿಯನ್ನು ಶ್ಲಾಘಿಸಿದ್ದಾರೆ. ‘‘ವಿರಾಟ್ ಕೊಹ್ಲಿಗೆ ಅವರೇ ಸಾಟಿ. ಅವರಿಗೆ ಸವಾಲೆಸೆಯಲು ಸಾಧ್ಯವಿಲ್ಲ. ಆದರೆ, ಕೊಹ್ಲಿ ಅನುಪಸ್ಥಿತಿಯಲ್ಲೂ ಭಾರತ ತಂಡ ಏಶ್ಯಕಪ್‌ನಲ್ಲಿ ನಿಜವಾಗಿಯೂ ಉತ್ತಮ ಪ್ರದರ್ಶನ ನೀಡಿದೆ’’ ಎಂದು ಖಲೀಜ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಯೂನಿಸ್ ಅಭಿಪ್ರಾಯಪಟ್ಟರು.

 ‘‘ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ದೊಡ್ಡ ವ್ಯತ್ಯಾಸ ಉಂಟು ಮಾಡಬಲ್ಲರು. ಏಶ್ಯಕಪ್ ಟೂರ್ನಮೆಂಟ್‌ನಲ್ಲಿ ವಿರಾಟ್ ಅನುಪಸ್ಥಿತಿಯಲ್ಲಿ ರೋಹಿತ್ ಅಪೂರ್ವ ಪ್ರದರ್ಶನ ನೀಡಿದ್ದಾರೆ. ರೋಹಿತ್ ತುಂಬಾ ಶಾಂತ ಸ್ವಭಾವದವರಾಗಿದ್ದು, ನಾಯಕತ್ವ ವಿಷಯದಲ್ಲಿ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದಾರೆ. ನಾನು ಅವರ ನಾಯಕತ್ವವನ್ನು ಐಪಿಎಲ್‌ನಲ್ಲಿ ನೋಡಿದ್ದೇನೆ. ಅವರು ಆಟಗಾರರಿಗೆ ತನ್ನದೇ ನಿರ್ಧಾರ ಕೈಗೊಳ್ಳಲು ಅವಕಾಶ ನೀಡುತ್ತಾರೆ. ಅವರೊಬ್ಬ ದಕ್ಷ ನಾಯಕ’’ ಎಂದು ಯೂನಿಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News