ಬಿಬಿಎಂಪಿ ಮೇಯರ್, ಆಯುಕ್ತರ ಬಂಗಲೆ ಯೋಜನೆ ರದ್ದು

Update: 2018-10-03 17:18 GMT

ಬೆಂಗಳೂರು, ಅ.3: ಬಿಬಿಎಂಪಿ ಮೇಯರ್ ಹಾಗೂ ಆಯುಕ್ತರಿಗಾಗಿ ಕಟ್ಟುಲು ಉದ್ದೇಶಿಸಿದ್ದ ಎರಡು ಬಂಗಲೆ ನಿರ್ಮಿಸುವ ಯೋಜನೆಯನ್ನು ನೂತನ ಮೇಯರ್ ಗಂಗಾಂಬಿಕೆ ರದ್ದುಪಡಿಸಿ ಆದೇಶಿಸಿದ್ದಾರೆ.

ಈ ಎರಡು ಬಂಗಲೆ ನಿರ್ಮಾಣಕ್ಕೆ 5ಕೋಟಿ ರೂ.ವನ್ನು ಬಿಬಿಎಂಪಿಯ 2018-19ನೆ ಸಾಲಿನ ಬಜೆಟ್‌ನಲ್ಲಿ ಮೀಸಲಿರಿಸಿತ್ತು. ಆದರೆ, ದುಂದುವೆಚ್ಚಕ್ಕೆ ಕಡಿವಾಣ ಹಾಕುವುದು ಹಾಗೂ ಪಾಲಿಕೆಗೆ ಆರ್ಥಿಕ ಹೊರೆ ತಪ್ಪಿಸುವ ಸಲುವಾಗಿ ಈ ಯೋಜನೆಯನ್ನು ಕೈ ಬಿಡಲು ಉದ್ದೇಶಿಸಲಾಗಿದೆ ಎಂದು ಮೇಯರ್ ಸ್ಪಷ್ಟಪಡಿಸಿದ್ದಾರೆ.

ಗುತ್ತಿಗೆದಾರಿನಿಗೆ ದಂಡ: ನಗರದ ಜಯಮಹಲ್ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ರಸ್ತೆ ಗುಂಡಿಗಳನ್ನು ಮುಚ್ಚಿದ್ದ ಗುತ್ತಿಗೆದಾರನೊಬ್ಬನಿಗೆ ಮೇಯರ್ ಗಂಗಾಂಬಿಕೆ ಒಂದು ಲಕ್ಷ ರೂ. ದಂಡ ವಿಧಿಸಿದ್ದಾರೆ.

ಅವೈಜ್ಞಾನಿಕವಾಗಿ ಗುಂಡಿಗೆ ಟಾರ್ ಹಾಕಿರುವುದನ್ನು ಹೊರತೆಗೆದು ಮತ್ತೊಮ್ಮೆ ಹಾಕಬೇಕು. ಅವೈಜ್ಞಾನಿಕವಾಗಿ ಎಷ್ಟು ರಸ್ತೆ ಗುಂಡಿಗಳಿಗೆ ಟಾರ್ ಹಾಕಲಾಗಿದೆ ಎಂಬ ಮಾಹಿತಿಯನ್ನು ಪಡೆದು, ಅಲ್ಲೆಲ್ಲ ಮತ್ತೊಮ್ಮೆ ಟಾರ್ ಹಾಕುವಂತೆ ನೋಡಿಕೊಳ್ಳಬೇಕೆಂದು ಜಂಟಿ ಆಯುಕ್ತರಿಗೆ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News