ಸೋಲಿನ ಸರಪಳಿ ಮುರಿದ ಜಮ್ಮು-ಕಾಶ್ಮೀರ ತಂಡ

Update: 2018-10-03 18:36 GMT

ಚೆನ್ನೈ, ಅ.3: ಮಳೆಬಾಧಿತ ವಿಜಯ್ ಹಝಾರೆ ಟ್ರೋಫಿಯ ‘ಸಿ’ ಗುಂಪಿನ ಪಂದ್ಯದಲ್ಲಿ ರಾಜಸ್ಥಾನವನ್ನು 3 ವಿಕೆಟ್‌ಗಳಿಂದ ಮಣಿಸಿದ ಜಮ್ಮು-ಕಾಶ್ಮೀರ ಸತತ ಆರು ಸೋಲುಗಳ ಸರಪಳಿ ಮುರಿದಿದೆ. ವಿಜೆಡಿ ನಿಯಮದಡಿ 36 ಓವರ್‌ಗಳಲ್ಲಿ 179 ರನ್ ಪರಿಷ್ಕೃತ ಗುರಿ ಪಡೆದ ಜಮ್ಮು-ಕಾಶ್ಮೀರ ಶುಭಂ ಖುಜುರಿಯಾ(57) ಹಾಗೂ ಇಯಾನ್ ಚೌಹಾನ್(51) ಅರ್ಧಶತಕದ ಕಾಣಿಕೆ ನೆರವಿನಿಂದ 3 ಎಸೆತ ಬಾಕಿ ಇರುವಾಗಲೇ ಗೆಲುವಿನ ನಗೆ ಬೀರಿತು. ಇದಕ್ಕೆ ಮೊದಲು ಬ್ಯಾಟಿಂಗ್ ಆಯ್ದುಕೊಂಡ ರಾಜಸ್ಥಾನ 8 ವಿಕೆಟ್ ನಷ್ಟಕ್ಕೆ 218 ರನ್ ಕಲೆ ಹಾಕಿತ್ತು. ಜ.ಕಾ.ದ ನಾಯಕ ಪರ್ವೇಝ್ ರಸೂಲ್ 36ಕ್ಕೆ 3 ವಿಕೆಟ್ ಉರುಳಿಸಿದರು. ವಸೀಂ ರಾಝಾ 23ಕ್ಕೆ2 ವಿಕೆಟ್ ಪಡೆದು ಮಿತವ್ಯಯಿ ಎನಿಸಿಕೊಂಡರು. ಅರ್ಧಶತಕ ಸಿಡಿಸಿದ ಸಲ್ಮಾನ್ ಖಾನ್(60) ಹಾಗೂ ಮನೆಂದರ್ ಸಿಂಗ್(50) ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News