×
Ad

ಜಪಾನೀಸ್ ಟೌನ್‌ಶಿಪ್ ನಿರ್ಮಾಣ‌ ಸಂಬಂಧ ಚರ್ಚೆ ನಡೆಸಿದ ಡಿಸಿಎಂ ಪರಮೇಶ್ವರ್

Update: 2018-10-04 22:30 IST

ಬೆಂಗಳೂರು,ಅ.4: ವಸಂತನರಸಾಪುರದಲ್ಲಿ ಕೈಗಾರಿಕಾ ವಲಯ ನಿರ್ಮಾಣವಾಗುತ್ತಿದ್ದು, ಇಲ್ಲಿಯೇ ಜಪಾನೀಸ್ ಟೌನ್‌ಶಿಪ್ ತೆರೆಯಲು ಸಹ ಮುಂದಾಗಿದ್ದೇವೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು. 

ಜಪಾನ ದೇಶದ ಕೌನ್ಸಿಲ್ ಟುಕಾಯುಕಿ ಕಿಟಗಾವ ವಿಧಾನಸೌಧದಲ್ಲಿ ಪರಮೇಶ್ವರ್ ಅವರನ್ನು ಭೇಟಿ ಮಾಡಿ ಚರ್ಚಿಸಿದರು. 

ಹಿಂದಿನಿಂದಲೂ ಜಪಾನೀಸ್ ಟೌನ್‌ಶಿಪ್ ನಿರ್ಮಾಣದ ಕನಸು ಇದೆ. ವಸಂತನರಸಾಪುರಸಲ್ಲಿ ಈಗಾಗಲೇ ಭೂ ಸ್ವಾಧೀನ ಪ್ರಕ್ರಿಯೆ ಬಹುತೇಕ ನಡೆಯುತ್ತಿದೆ. ಅಲ್ಲಿನ ಮೂಲಸೌಕರ್ಯ ಒದಗಿಸಿಕೊಡುವ ಸಂಬಂಧ ಇನ್ನೆರಡು ದಿನದಲ್ಲಿ ಸಭೆ ಕರೆದಿದ್ದು, ಆ ಸಂದರ್ಭದಲ್ಲಿ ಸಭೆಗೆ ತಾವೂ ಬರಬಹುದು ಎಂದು ಆಹ್ವಾನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News