ಪ್ರಥಮ ಟೆಸ್ಟ್: ವಿರಾಟ್ ಕೊಹ್ಲಿ 24ನೇ ಶತಕ

Update: 2018-10-05 06:05 GMT

ರಾಜ್‌ಕೋಟ್, ಅ.5: ವೆಸ್ಟ್‌ಇಂಡೀಸ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ಮತ್ತೊಂದು ಆಕರ್ಷಕ ಶತಕ ದಾಖಲಿಸಿದರು.

ಎರಡನೇ ದಿನವಾದ ಶುಕ್ರವಾರ 106.2ನೇ ಓವರ್‌ನಲ್ಲಿ ವಿಂಡೀಸ್‌ನ ಸ್ಪಿನ್ನರ್ ದೇವೇಂದ್ರ ಬಿಶೂ ಎಸೆತವನ್ನು ಬೌಂಡರಿ ಗೆರೆ ದಾಟಿಸಿದ ಕೊಹ್ಲಿ 184 ಎಸೆತಗಳಲ್ಲಿ 24ನೇ ಶತಕ ಪೂರೈಸಿದರು. ಈ ಮೂಲಕ ಆಸ್ಟ್ರೇಲಿಯದ ಕ್ರಿಕೆಟ್ ಲೆಜೆಂಡ್ ಡಾನ್ ಬ್ರಾಡ್ಮನ್ ಬಳಿಕ ಅತ್ಯಂತ ವೇಗವಾಗಿ 24 ಶತಕಗಳನ್ನು ಸಿಡಿಸಿದ ಸಾಧನೆ ಮಾಡಿದರು.

ಬ್ರಾಡ್ಮನ್ 66 ಇನಿಂಗ್ಸ್‌ಗಳಲ್ಲಿ 24 ಶತಕ ಸಿಡಿಸಿದ್ದರೆ, ಕೊಹ್ಲಿ 123 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದರು.

ಕೊಹ್ಲಿ ನಾಯಕನಾಗಿ 17ನೇ ಶತಕ ಹಾಗೂ ವೆಸ್ಟ್‌ಇಂಡೀಸ್ ವಿರುದ್ಧ ಎರಡನೇ ಬಾರಿ ಮೂರಂಕೆಯನ್ನು ದಾಖಲಿಸಿದರು.

ತಾಳ್ಮೆಯ ಇನಿಂಗ್ಸ್ ಆಡಿದ ಕೊಹ್ಲಿ 184 ಎಸೆತಗಳನ್ನು ಎದುರಿಸಿ ಕೇವಲ 7 ಬೌಂಡರಿ ಸಿಡಿಸಿದರು.

5ನೇ ವಿಕೆಟ್‌ಗೆ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರೊಂದಿಗೆ 133 ರನ್ ಜೊತೆಯಾಟ ನಡೆಸಿರುವ ಕೊಹ್ಲಿ ತಂಡವನ್ನು ಬೃಹತ್ ಮೊತ್ತದತ್ತ ಮುನ್ನಡೆಸುತ್ತಿದ್ದಾರೆ.

2ನೇ ಶತಕ ವಂಚಿತ ಪಂತ್

 ಇದೇ ವೇಳೆ ದಿಲ್ಲಿ ಯುವ ಬ್ಯಾಟ್ಸ್‌ಮನ್ ಪಂತ್ ಕೇವಲ 8 ರನ್‌ನಿಂದ ಶತಕ ವಂಚಿತರಾದರು. 84 ಎಸೆತಗಳನ್ನು ಎದುರಿಸಿದ ಪಂತ್ 8 ಬೌಂಡರಿ ಹಾಗೂ 4 ಸಿಕ್ಸರ್‌ಗಳನ್ನು ಸಿಡಿಸುವುದರೊಂದಿಗೆ ಎರಡನೇ ಶತಕದತ್ತ ಮುಖ ಮಾಡಿದ್ದರು. ಆದರೆ,ಸ್ಪಿನ್ನರ್ ಬಿಶೂ ಅವರು ಪಂತ್‌ಗೆ ಶತಕ ನಿರಾಕರಿಸಿದರು.

ವೇಗವಾಗಿ 24 ಶತಕಗಳನ್ನು ಸಿಡಿಸಿದ ದಾಂಡಿಗರು

         ಇನಿಂಗ್ಸ್‌       ಆಟಗಾರ

              66     ಬ್ರಾಡ್ಮನ್

              123    ಕೊಹ್ಲಿ

              125    ತೆಂಡುಲ್ಕರ್

               128    ಗವಾಸ್ಕರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News