ಕಲಾಶ್ರೀ ಪ್ರಶಸ್ತಿ ಪ್ರಕಟ
ಬೆಂಗಳೂರು, ಅ.5: ರಾಜ್ಯ ಸಂಗೀತ ನೃತ್ಯ ಅಕಾಡೆಮಿ ಪ್ರತಿಷ್ಠಿತ ಕಾರ್ಯಕ್ರಮಗಳಲ್ಲಿ ಒಂದಾದ ಕರ್ನಾಟಕ ಕಲಾಶ್ರೀ ಪ್ರಶಸ್ತಿಗೆ ಸಂಗೀತ ಮತ್ತು ನೃತ್ಯ ಕ್ಷೇತ್ರಗಳಲ್ಲಿ ಅನುಪಮ ಸೇವೆ ಸಲ್ಲಿಸಿದ ಕಲಾವಿದರನ್ನು 2018-19ನೆ ಸಾಲಿನ ಕರ್ನಾಟಕ ಕಲಾಶ್ರೀ ಪ್ರಶಸ್ತಿಗೆ ಅಕಾಡೆಮಿ ಅಧ್ಯಕ್ಷ ಫಯಾಝ್‌ಖಾನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸರ್ವಸದಸ್ಯರು ಈ ಕೆಳಕಂಡಂತಹ ಪ್ರಶಸ್ತಿ ಪುರಸ್ಕೃತರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದ್ದಾರೆ.
ಕರ್ನಾಟಕ ಕಲಾಶ್ರೀ ಗೌರವ ಪ್ರಶಸ್ತಿ: ಫಕೀರಪ್ಪತಾಂದಳೆ, ಹಿರೇಕೆರೂರು, ಹಾವೇರಿ ಜಿಲ್ಲೆ-ಹಿಂದೂಸ್ಥಾನಿ ಸಂಗೀತ-ಪಕವಾಜ್. ಸದಾಶಿವ ಪಾಟೀಲ, ಕೊಪ್ಪಳ-ಸುಗಮ ಸಂಗೀತ.
ವಾರ್ಷಿಕ ಪ್ರಶಸ್ತಿಗಳು-ಕರ್ನಾಟಕ ಸಂಗೀತ: ಬೆಂಗಳೂರಿನ ಡಾ.ಬಿ.ಎಂ.ಜಯಶ್ರೀ-ಹಾಡುಗಾರಿಕೆ, ಎಚ್.ಎಸ್.ವೇಣುಗೋಪಾಲ್-ಕೊಳಲು, ಅನೂರು ಅನಂತಕೃಷ್ಣ ಶರ್ಮ(ಶಿವು)-ಮೃದಂಗ, ಕೋಲಾರದ ಪಿ.ನಾರಾಯಣಸ್ವಾಮಿ-ಡೋಲು.
ಹಿಂದೂಸ್ತಾನಿ ಸಂಗೀತ: ಬೆಂಗಳೂರಿನ ಡಾ.ನಾಗರಾಜರಾವ್ ಹವಾಲ್ದಾರ್-ಗಾಯನ, ಬೆಳಗಾವಿಯ ಸುಧಾಂಶು ಕುಲಕರ್ಣಿ-ಹಾರ್ಮೋನಿಯಂ, ಗುಲ್ಬರ್ಗ ಜಿಲ್ಲೆಯ ಸೋಮಶೇಖರ್ ಪಾಟೀಲ್-ತಬಲ.
ನೃತ್ಯ: ಬೆಂಗಳೂರಿನ ಸುಭದ್ರಾ ಪ್ರಭು-ಕುಚಿಪುಡಿ, ಮೈಸೂರಿನ ಡಾ.ಕೆ.ಕುಮಾರ್-ಭರತನಾಟ್ಯ, ಬೆಂಗಳೂರಿನ ನಂದಿನಿ ಕೆ.ಮೆಹ್ತಾ-ಕಥಕ್, ಮಂಗಳೂರಿನ ರಾಜಶ್ರೀ ಎಸ್.ಶೆಣೈ-ಭರತನಾಟ್ಯ.
ಸುಗಮ ಸಂಗೀತ: ಬೆಂಗಳೂರಿನ ಎಚ್.ಫುಲ್ಗುಣ, ಕಥಾ ಕೀರ್ತನ: ಹಾವೇರಿ ಜಿಲ್ಲೆಯ ಶ್ರೀ ಶಿವಮೂರ್ತಿ ಶಾಸ್ತ್ರಿಗಳು ಹಿರೇಮಠ, ಗಮಕ: ಬೆಂಗಳೂರಿನ ಎಂ.ಆರ್.ಕೇಶವಮೂರ್ತಿ-ವಾಚನ, ತುಮಕೂರು ಜಿಲ್ಲೆಯ ಜಿ.ಎಸ್.ಶ್ರೀನಿವಾಸಮೂರ್ತಿ-ವ್ಯಾಖ್ಯಾನ. ಸಂಘ ಸಂಸ್ಥೆ: ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಶ್ರೀಮಂತ ನಾನಾಸಾಹೇಬ ನಾಡಗೀರ ಸ್ಮತಿ ಪ್ರತಿಷ್ಠಾನ.
ಪ್ರಶಸ್ತಿ ಪ್ರದಾನ ಸಮಾರಂಭವನ್ನು ಅ.30ರಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಲಾಗುವುದು. ಗೌರವ ಪ್ರಶಸ್ತಿ ಪುರಸ್ಕೃತರಿಗೆ 50 ಸಾವಿರ ರೂ.ಗೌರವಧನ, ವಾರ್ಷಿಕ ಪ್ರಶಸ್ತಿ ಪುರಸ್ಕೃತರಿಗೆ 25 ಸಾವಿರ ರೂ.ಗಳ ಗೌರವಧನ, ಶಾಲು, ನೆನಪಿನ ಕಾಣಿಕೆ, ಪ್ರಶಸ್ತಿ ಪತ್ರ ಹಾರ, ಫಲತಾಂಬೂಲಗಳನ್ನು ಕರ್ನಾಟಕ ಕಲಾಶ್ರೀ ಪ್ರಶಸ್ತಿಯೊಂದಿಗೆ ನೀಡಿ ಗೌರವಿಸಾಗುವುದೆಂದು ಪ್ರಕಟಣೆ ತಿಳಿಸಿದೆ.