ಸದಾಶಿವ ಆಯೋಗದ ವರದಿ: ಅ.15ಕ್ಕೆ ಶಿಫಾರಸ್ಸು ವಿರೋಧಿಸಿ ಪ್ರತಿಭಟನಾ ಧರಣಿ

Update: 2018-10-05 16:13 GMT

ಬೆಂಗಳೂರು, ಅ.5: ಸಾರ್ವಜನಿಕ ಚರ್ಚೆಯಾಗದಿರುವ ನ್ಯಾಎ.ಜೆ.ಸದಾಶಿವ ಆಯೋಗದ ವರದಿ ಏಕಮುಖವಾಗಿ ಶಿಫಾರಸ್ಸು ಮಾಡಿಸಲು ನಡೆಯುತ್ತಿರುವ ಷಡ್ಯಂತರ ವಿರೋಧಿಸಿ ಅ.15ಕ್ಕೆ ಪ್ರತಿಭಟನೆ ಧರಣಿ ನಡೆಸಲು ನಿರ್ಧರಿಸಲಾಗಿದೆ.

ಶುಕ್ರವಾರ ನಗರದ ಜಸ್ಮಾ ಭವನದಲ್ಲಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಏರ್ಪಡಿಸಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಸಚಿವ ರುದ್ರಪ್ಪ ಲಮಾಣಿ, ನ್ಯಾ.ಸದಾಶಿವ ಆಯೋಗದ ವರದಿ ಸಾರ್ವಜನಿಕರ ಚರ್ಚೆಗೆ ಬಿಡಬೇಕು. ತಜ್ಞರು, ಎಲ್ಲಾ ದಲಿತ ಸಮುದಾಯಗಳ ಅಹವಾಲು ಪರಿಗಣಿಸಬೇಕು. ಏಕಮುಖವಾಗಿ ಕೇಂದ್ರಕ್ಕೆ ಶಿಫಾರಸ್ಸು ಮಾಡಬಾರದು ಎಂದು ಹೇಳಿದರು.

ಈ ವರದಿಯ ಕುರಿತು ಮನವರಿಕೆ, ಜಾತಿ ಸಮೀಕ್ಷೆ ವರದಿ ಬಿಡುಗಡೆ ಮತ್ತು ಮೀಸಲಾತಿ ಮಿತಿಯನ್ನು ಶೇ.70 ವಿಸ್ತರಿಸಲು ಶೀಘ್ರದಲ್ಲೇ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಲಾಗುವುದು. ಜೊತೆಗೆ, ಮುಂದಿನ ತಿಂಗಳು ಬೆಂಗಳೂರಿನಲ್ಲಿ ಪರಿಶಿಷ್ಟ ಸಮುದಾಯಗಳ ಐಕ್ಯತಾ ಸಮಾವೇಶ ಏರ್ಪಡಿಸಲಾಗುವುದು ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಮಾಜಿ ಸಚಿವ ಪಿ.ಎ.ನರೇಂದ್ರ ಸ್ವಾಮಿ, ರೇವುನಾಯ್ಕಾ ಬೆಳಮಗಿ, ದಲಿತ ಚಿಂತಕ ಡಾ.ನಾರಾಯಣಸ್ವಾಮಿ, ವಕೀಲ ಅನಂತನಾಯ್ಕಾ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News