ಪಂಡಿತ್ ರಾಜೀವ್ ತಾರನಾಥ್‌ಗೆ ರಾಜ್ಯ ಸಂಗೀತ ವಿದ್ವಾನ್ ಗೌರವ ಪ್ರಶಸ್ತಿ
Update: 2018-10-06 21:05 IST
ಬೆಂಗಳೂರು, ಅ.6: ಕನ್ನಡ ಮತ್ತು ಸಂಸ್ಕತಿ ಇಲಾಖಾವತಿಯಿಂದ ನೀಡುವ 2018 ನೆ ಸಾಲಿನ ರಾಜ್ಯ ಸಂಗೀತ ವಿದ್ವಾನ್ ಗೌರವ ಪ್ರಶಸ್ತಿಗೆ ಬೆಂಗಳೂರಿನ ಪಂಡಿತ್ ರಾಜೀವ್ ತಾರಾನಾಥ್ ಭಾಜನರಾಗಿದ್ದಾರೆ.
ಸದರಿ ಪ್ರಶಸ್ತಿಗೆ ಅರ್ಹರನ್ನು ಆಯ್ಕೆಮಾಡಲು ಎಂ.ವೆಂಕಟೇಶ ಕುಮಾರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯನ್ನು ರಚಿಸಲಾಗಿತ್ತು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.