×
Ad

ಕಿದ್ವಾಯಿ ಆಸ್ಪತ್ರೆಯಲ್ಲಿ ರಜಾ ದಿನಗಳಲ್ಲೂ ಶಸ್ತ್ರ ಚಿಕಿತ್ಸೆ ಸೇವೆ ಲಭ್ಯ

Update: 2018-10-07 21:56 IST

ಬೆಂಗಳೂರು, ಅ.7: ದೇಶದಲ್ಲೇ ಅತ್ಯುತ್ತಮ ಸೇವೆ ಒದಗಿಸುವ ಆಸ್ಪತ್ರೆ ಎಂದೇ ಗುರುತಿಸಿಕೊಂಡಿರುವ ನಗರದ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಎಲ್ಲ ರಜಾ ದಿನಗಳಲ್ಲೂ ರೋಗಿಗಳಿಗೆ ಶಸ್ತ್ರ ಚಿಕಿತ್ಸೆ ಸೇವೆಗಳು ಲಭ್ಯವಾಗಲಿವೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ತುರ್ತು ಓಟಿ(ಆಪರೇಷನ್ ಥಿಯೇಟರ್) ಸೇವೆ ವರ್ಷದ 365 ದಿನಗಳೂ ದೊರೆಯಲಿವೆ. ಸರಕಾರಿ ಆದೇಶದಲ್ಲಿ ಈ ವಿಚಾರ ಸ್ಪಷ್ಟಪಡಿಸಿದ್ದು, ಕೆಲವೇ ಕೆಲವು ಪೂರ್ವ ನಿಗದಿತ ರಜೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ರಜಾ ದಿನಗಳಲ್ಲಿ ರೋಗಿಗಳಿಗೆ ಆಸ್ಪತ್ರೆಯಲ್ಲಿ ಓಟಿ(ಆಪರೇಷನ್ ಥಿಯೇಟರ್) ಸೇವೆಗಳು ಲಭಿಸಲಿದೆ ಎಂದು ಕಿದ್ವಾಯಿ ಕ್ಯಾನ್ಸರ್ ಸಂಸ್ಥೆ ನಿರ್ದೇಶಕ ಡಾ.ರಾಮಚಂದ್ರ ಅವರು ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ರವಿವಾರಗಳು ಹಾಗೂ ಆಯುಧ ಪೂಜೆ(ಅ.18), ನರಕ ಚತುದರ್ಶಿ(ನ.6) ಮತ್ತು ಬಲಿಪಾಡ್ಯಮಿ(ನ.8) ಈ ಹೆಚ್ಚುವರಿ ಮೂರು ದಿನಗಳ ರಜೆಯಲ್ಲಿ ಇವು ನಿರ್ದೇಶಕರ ನಿರ್ದೇಶನದಂತೆ ಕಾರ್ಯ ನಿರ್ವಹಿಸಲ್ಪಡುತ್ತವೆ. ಎಲ್ಲ ವಿಭಾಗಗಳ ಸರ್ಜನ್‌ಗಳು ಮತ್ತು ಹಿರಿಯ ವೈದ್ಯರುಗಳು ಶಸ್ತ್ರಚಿಕಿತ್ಸೆಗಳನ್ನು ನಡೆಸಲು ಸಕರಿಸುವಂತೆ ಅವರು ಕೋರಿದ್ದಾರೆ.

ಇ-ಹಾಸ್ಪಿಟಲ್ ಗೋ-ಲೈವ್ ಸೌಲಭ್ಯ: ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯು ಅ.1ರಿಂದಲೇ ರೋಗಿಗಳು ಮತ್ತು ಸಿಬ್ಬಂದಿಯ ಅನುಕೂಲಕ್ಕಾಗಿ ಇ-ಹಾಸ್ಪಿಟಲ್ ಗೋ-ಲೈವ್ ಸೌಲಭ್ಯ ಆರಂಭಿಸಿದೆ. ಅತ್ಯಾಧುನಿಕ ಸಾಫ್ಟವೇರ್‌ನಿಂದಾಗಿ ಇದು ಆಸ್ಪತ್ರೆಯ ಸಿಬ್ಬಂದಿಗೂ ನೆರವಾಗಲಿದೆ.
ಇದರಿಂದಾಗಿ ಹೊಸ ನೋಂದಣಿ, ಕ್ಯಾಸ್ ಬಿಲ್ಲಿಂಗ್, ಕ್ರೆಡಿಟ್ ಬಿಲ್ಲಿಂಗ್, ಆಸ್ಪತ್ರೆಗೆ ದಾಖಲೆ ಮತ್ತು ಡಿಸಾರ್ಜ್ ಪ್ರಕ್ರಿಯೆ ಸುಗಮ ಮತ್ತು ಸರಳವಾಗಲಿದೆ ಎಂದು ಡಾ.ರಾಮಚಂದ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸಂಸ್ಥೆಯಲ್ಲಿ ಈಗ ಇ-ಆಸ್ಪತ್ರೆ, ಸಂದರ್ಶಕರ ನಿರ್ವಹಣೆ ವ್ಯವಸ್ಥೆ ಇ-ಆಫೀಸ್‌ನಂಥ ಮತ್ತಿತರ ಸೌಲಭ್ಯಗಳು ಲಭ್ಯವಿದ್ದು, ಇದು ಸಾಕಾರಗೊಳ್ಳಲು ಕಾರಣರಾದ ಆಸ್ಪತ್ರೆಯ ಎಲ್ಲ ಸಿಬ್ಬಂದಿಗೆ ನಿದೆರ್ೀಶಕರು ಅಭಿನಂದನೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News