ಏಶ್ಯನ್ ಪ್ಯಾರಾ ಗೇಮ್ಸ್: ಭಾರತದ ಚಿನ್ನದ ಖಾತೆ ತೆರೆದ ಸಂದೀಪ್

Update: 2018-10-08 11:56 GMT

ಜಕಾರ್ತ, ಅ.8: ಇಲ್ಲಿ ನಡೆಯುತ್ತಿರುವ ಏಶ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಭಾರತದ ಜಾವೆಲಿನ್ ಎಸೆತಗಾರ ಸಂದೀಪ್ ಚೌಧರಿ ಪದಕ ಪಟ್ಟಿಯಲ್ಲಿ ಚಿನ್ನದ ಖಾತೆ ತೆರೆದರು.

ಸೋಮವಾರ ನಡೆದ ಪುರುಷರ ಎಫ್-42-44/61-64 ವಿಭಾಗದಲ್ಲಿ ತನ್ನ ಮೂರನೇ ಯತ್ನದಲ್ಲಿ 60.01 ಮೀ.ದೂರಕ್ಕೆ ಜಾವೆಲಿನ್ ಎಸೆದು ಚಿನ್ನದ ಪದಕ ತನ್ನದಾಗಿಸಿಕೊಂಡರು.

ಶ್ರೀಲಂಕಾದ ಚಾಮಿಂಡಾ ಸಂಪತ್(59.32 ಮೀ.)ಬೆಳ್ಳಿ ಪದಕವನ್ನು ಜಯಿಸಿದ್ದಾರೆ. ಇರಾನ್‌ನ ಓಮಿದಿ ಅಲಿ(58.97 ಮೀ.)ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ಗೇಮ್ಸ್‌ನ ಮೊದಲ ದಿನವಾದ ರವಿವಾರ ಭಾರತ ಎರಡು ಬೆಳ್ಳಿ ಹಾಗೂ ಮೂರು ಕಂಚಿನ ಪದಕಗಳನ್ನು ಜಯಿಸಿತ್ತು.

ರವಿವಾರ 49 ಕೆಜಿ ಪುರುಷರ ಪವರ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಫರ್ಮಾನ್ ಬಾಷಾ ಬೆಳ್ಳಿ ಹಾಗೂ ಪರಮ್‌ಜೀತ್ ಕುಮಾರ್ ಕಂಚಿನ ಪದಕ ಜಯಿಸಿದ್ದಾರೆ. ಸ್ವಿಮ್ಮರ್ ದೇವಾಂಶಿ ಸತಿಜವಾನ್ ಮಹಿಳೆಯರ 100 ಮೀ. ಬಟರ್‌ಫ್ಲೈ ಎಸ್-10 ವಿಭಾಗದಲ್ಲಿ ಬೆಳ್ಳಿ, ಸುಯಾಶ್ ಜಾಧವ್ ಪುರುಷರ 200 ಮೀ. ವೈಯಕ್ತಿಕ ಮಿಡ್ಲೆ ಎಸ್‌ಎಂ-7 ವಿಭಾಗದಲ್ಲಿ ಕಂಚಿನ ಪದಕ ತನ್ನದಾಗಿಸಿಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News