ವಸತಿ ಯೋಜನೆಗೆ 156 ಕೋಟಿ ಬಿಡುಗಡೆ

Update: 2018-10-08 15:29 GMT

ಬೆಂಗಳೂರು, ಅ. 8: ಬಸವ ವಸತಿ ಯೋಜನೆಯ ಸಾಮಾನ್ಯ ಯೋಜನೆ ಹಾಗೂ ವಾಜಪೇಯಿನಗರ ವಸತಿ ಯೋಜನೆಯಡಿ 156.36 ಕೋಟಿ ರೂ. ಬಿಡುಗಡೆ ಮಾಡಿ ವಸತಿ ಇಲಾಖೆ ಆದೇಶ ಹೊರಡಿಸಿದೆ.

ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ಮೂಲಕ ಈ ಎರಡು ಯೋಜಿನೆಗಳನ್ನು ಅನುಷ್ಠಾನ ಗೊಳಿಸಲಾಗುತ್ತಿದೆ. ಪ್ರಸಕ್ತ ಸಾಲಿನ ಆಯವ್ಯಯದಲ್ಲಿ 705.47 ಕೋಟಿ ರೂ. ಅನುದಾನದಲ್ಲಿ ಒದಗಿಸಲಾಗಿತ್ತು. ಈಗಾಗಲೇ ಪ್ರಥಮ ತ್ರೈಮಾಸಿಕ ಕಂತಿನಲ್ಲಿ 196.36 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿತ್ತು. ಎರಡನೆ ತ್ರೈಮಾಸಿಕ ಕಂತಿನಲ್ಲಿ ಬಸವ ಯೋಜನೆಗೆ 93.86 ಕೋಟಿ ರೂ. ಹಾಗೂ ವಾಜಪೇಯಿ ನಗರ ವಸತಿ ಯೋಜನೆಗೆ 62.50 ಕೋಟಿ ರೂ.ಗಳನ್ನು ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಬಿಡುಗಡೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News