ವೀರ ಮಹಾದೇವಿ ಪಾತ್ರಕ್ಕೆ ಸನ್ನಿ ಲಿಯೋನ್ ಬೇಡ: ಕರವೇ

Update: 2018-10-08 15:36 GMT

ಬೆಂಗಳೂರು, ಅ. 8: ವೀರ ಮಹಾದೇವಿ ಪಾತ್ರದಲ್ಲಿ ಚಿತ್ರ ನಟಿ ಸನ್ನಿ ಲಿಯೋನ್ ನಟಿಸುತ್ತಿರುವುದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಸೋಮವಾರ ನಗರದ ಮೌರ್ಯ ಹೊಟೇಲ್ ಬಳಿಯ ಗಾಂಧಿ ಪ್ರತಿಮೆ ಎದುರು ಧರಣಿ ನಿರತ ಪ್ರತಿಭಟನಾಕಾರರು, ಸನ್ನಿ ಲಿಯೋನ್ ಮತ್ತು ವೀರ ಮಹಾದೇವಿ ಅವರ ಸಮೀಕರಣವೇ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುತ್ತದೆ. ಹೀಗಾಗಿ ಚಿತ್ರದ ಪಾತ್ರಧಾರಿಗಳನ್ನು ಬದಲಾವಣೆ ಮಾಡದೆ ಇದ್ದರೆ ಉಗ್ರ ಪ್ರತಿಭಟನೆ ಮಾಡಲಾಗುವುದು. ಚಿತ್ರ ನಿರ್ಮಾಣಕ್ಕೆ ಅವಕಾಶ ಕೊಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ರಾಷ್ಟ್ರಕೂಟ ಅಮೋಘ ನೃಪತುಂಗ ಅವರ ಕಥೆ ಆಧರಿಸಿ ಸುಮಾರು 100 ಕೋಟಿ ರೂ. ವೆಚ್ಚದಲ್ಲಿ 5 ಭಾಷೆಗಳಲ್ಲಿ ವಿ.ಸಿ.ವಾಡಿ ಉದಯನ್ ಚಿತ್ರ ನಿರ್ಮಾಣ ಮಾಡುತ್ತಿದ್ದು, ಚಿತ್ರದಲ್ಲಿ ಇತಿಹಾಸವನ್ನು ತಿರುಚಲಾಗಿದೆ. ಅಲ್ಲದೆ, ಮೂರನೆ ಗೋವಿದಂ ಅವರನ್ನು ಗುಲಾಮರಂತೆ ಚಿತ್ರಿಸಲಾಗುತ್ತಿದೆ. ಬಹಳಷ್ಟು ವಿಷಯಗಳನ್ನು ತಿರುಚಿ ಇತಿಹಾಸಕ್ಕೆ ಅಪಚಾರ ಮಾಡಿರುವುದಲ್ಲದೆ ಕನ್ನಡಿಗರ ಭಾವನೆಗಳಿಗೂ ಧಕ್ಕೆ ಉಂಟು ಮಾಡಲಾಗುತ್ತಿದೆ ಎಂದು ಕರವೇ ಯುವ ಸೇನೆ ಆಕ್ರೋಶ ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News