ಪದವಿ ಕಾಲೇಜಿನ ಪ್ರಾಧ್ಯಾಪಕರಿಗೆ ಅ.10ರಿಂದ ವೃತ್ತಿ ಬುನಾದಿ ತರಬೇತಿ

Update: 2018-10-08 17:16 GMT

ಬೆಂಗಳೂರು, ಅ.8: ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯ ಬೋಧಕರಿಗೆ ಸೇವಾಪೂರ್ವ ತರಬೇತಿ ಹಾಗೂ ಸೇವಾವಧಿಯಲ್ಲಿ ತರಬೇತಿ ನೀಡುವ ಕಾರ್ಯಕ್ರಮದಡಿ ಸರಕಾರಿ ಪದವಿ ಕಾಲೇಜಿನ 90 ಮಂದಿ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಿಗೆ ವೃತ್ತಿ ಬುನಾದಿ ತರಬೇತಿ ಹಮ್ಮಿಕೊಳ್ಳಲಾಗಿದೆ.

ಧಾರವಾಡದ ಉನ್ನತ ಶಿಕ್ಷಣ ಅಕಾಡಮಿಯಲ್ಲಿ ಅ.10ರಿಂದ ನ.4ರವರೆಗೂ ತರಬೇತಿ ನಡೆಯಲಿದೆ. ಬೋಧನಾ ವ್ಯವಸ್ಥೆಯ ಸುಧಾರಣೆ, ಜ್ಞಾನದ ಉನ್ನತೀಕರಣ ಸೇರಿದಂತೆ ಹತ್ತಾರು ವಿಷಯಗಳ ಬಗ್ಗೆ ತಜ್ಞರ ಮೂಲಕ ತರಬೇತಿ ನೀಡಲಾಗುತ್ತದೆ. ರಾಜ್ಯದ 24 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ನ್ಯಾಕ್ ಪ್ರಕ್ರಿಯೆಯ ನೂತನ ಪದ್ಧತಿಯ ಬಗ್ಗೆ ಮಾರ್ಗದರ್ಶನ ನೀಡಲು ಮತ್ತು ಈಗಾಗಲೇ ಆಗಿರುವ ಕಾಲೇಜಿನ ಚಟುವಟಿಕೆಗಳ ಪ್ರಗತಿ ಪರಿಶೀಲನೆಗೆ ಅ.16ರಂದು ನಗರದ ಸರಕಾರಿ ವಿಜ್ಞಾನ ಕಾಲೇಜಿನಲ್ಲಿ ಒಂದು ದಿನದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. 24 ಸರಕಾರಿ ಕಾಲೇಜಿನ ಪ್ರಾಂಶುಪಾಲರು ಹಾಗೂ ನ್ಯಾಕ್ ಸಮನ್ವಯಾಧಿಕಾರಿಗಳು ತಮ್ಮ ಕಾಲೇಜಿನ ಪ್ರಗತಿ ವರದಿಯನ್ನು ತಪ್ಪದೆ ತರಬೇಕು ಎಂದು ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News