ಗಣೇಶ ವಿಸರ್ಜನೆ ವೇಳೆ ಪಟಾಕಿ ಸಿಡಿದು ಎಎಸ್ಸೈ ಕಣ್ಣಿಗೆ ಗಂಭೀರ ಗಾಯ: ಇಬ್ಬರ ಬಂಧನ

Update: 2018-10-09 12:58 GMT

ಬೆಂಗಳೂರು, ಅ.9: ಗಣೇಶನ ವಿಸರ್ಜನೆ ವೇಳೆ ಸಿಡಿಸಿದ ಪಟಾಕಿಯಿಂದ ಆರ್‌ಟಿ ನಗರ ಪೊಲೀಸ್ ಠಾಣೆಯ ಎಎಸ್ಸೈ ನಾರಾಯಣಪ್ಪ ಅವರ ಕಣ್ಣಿಗೆ ಗಂಭೀರ ಗಾಯಗಳಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಈ ಘಟನೆಗೆ ಕಾರಣರಾದ ಇಬ್ಬರನ್ನು ಬಂಧಿಸಿದ್ದಾರೆ.

ನಾರಾಯಣಪ್ಪ ಬಲಗಣ್ಣಿಗೆ ಪಟಾಕಿ ಕಿಡಿ ತಗುಲಿ ಗಂಭೀರವಾಗಿ ಗಾಯಗಳಾಗಿದ್ದು, ನಂತರ ಸಹಪೊಲೀಸರು ತಕ್ಷಣವೇ ನಾರಾಯಣಪ್ಪನನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಇದೀಗ ನಾರಾಯಣಪ್ಪ ಅವರು ಆರೋಗ್ಯ ಸುಧಾರಿಸಿದೆ ಎಂದು ತಿಳಿದುಬಂದಿದೆ.

ಏನಿದು ಪ್ರಕರಣ: ಅನುಮತಿ ನಿರಾಕರಿಸಿದ್ದರೂ ಆರ್.ಟಿ.ನಗರ ಅಂಚೆ ಕಚೇರಿ ಮುಂಭಾಗದ ರಸ್ತೆಯಲ್ಲಿ ಅ.7ರಂದು ಗಣೇಶನ ಪ್ರತಿಷ್ಠಾಪನೆ ಮಾಡಲಾಗಿತ್ತು. ಪಟಾಕಿ ಹೊಡೆಯದೆ ಗಣೇಶ ಸರ್ಜನೆ ಮಾಡಿ ಎಂದು ಪೊಲೀಸರು ಸೂಚಿಸಿದರೂ ಅವರ ಮಾತನ್ನು ಲೆಕ್ಕಿಸದೆ ಹುಡುಗರ ಗುಂಪು ಪಟಾಕಿಯನ್ನು ಸಿಡಿಸಿದ್ದರು ಎನ್ನಲಾಗಿದೆ.

ಇದೇ ವೇಳೆ ಅಲ್ಲಿಗೆ ಆಗಮಿಸಿದ್ದ ಎಎಸ್ಸೈ ನಾರಾಯಣಪ್ಪ ಅವರ ಬಲಗಣ್ಣಿಗೆ ಪಟಾಕಿ ಕಿಡಿ ತಗುಲಿ ಗಂಭೀರವಾಗಿ ಗಾಯವಾಗಿತ್ತು. ಪೊಲೀಸರು ತಕ್ಷಣವೇ ನಾರಾಯಣಪ್ಪನನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಕಣ್ಣಿಗೆ ಬಲವಾಗಿ ಗಾಯವಾಗಿದ್ದರಿಂದ ಕಣ್ಣಿಗೆ ಶಸ್ತ್ರ ಚಿಕಿತ್ಸೆ ಮಾಡಿದ್ದರು. ಇದಾದ ಬಳಿ, ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News