×
Ad

ವಿಧಾನಪರಿಷತ್ ಸದಸ್ಯ ರಮೇಶ್‌ಗೌಡ ವಿರುದ್ಧ ವರದಿಗಳಿಗೆ ನ್ಯಾಯಾಲಯ ತಡೆಯಾಜ್ಞೆ

Update: 2018-10-09 21:11 IST

ಬೆಂಗಳೂರು, ಅ.9: ಜೆಡಿಎಸ್ ಪಕ್ಷದ ವಿಧಾನಪರಿಷತ್ ಸದಸ್ಯ ರಮೇಶ್‌ಗೌಡ ವಿರುದ್ಧ ಯಾವುದೇ ಮಾನಹಾನಿಕರ, ಊಹಾತ್ಮಕ, ಆಧಾರರಹಿತ ಸುದ್ದಿಗಳನ್ನು ವರದಿಗಳನ್ನು ಸುದ್ದಿ ಮಾಧ್ಯಮದ ಯಾವುದೇ ಪ್ರಕಾರಗಳಲ್ಲಿ ಪ್ರಸಾರ, ಪ್ರಕಟನೆ ಮಾಡಬಾರದು ಎಂದು ಸಿಟಿ ಸಿವಿಲ್ ನ್ಯಾಯಾಲಯ ಮಂಗಳವಾರ ತಡೆಯಾಜ್ಞೆ ನೀಡಿದೆ.

ರಮೇಶ್‌ಗೌಡ ವಿರುದ್ಧ ಕೆಲ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದ, ದುರುದ್ದೇಶಪೂರಿತ, ಆಧಾರ ರಹಿತ ವರದಿಗಳಿಗೆ ತಡೆ ನೀಡುವಂತೆ ಕೋರಿ ರಮೇಶ್‌ಗೌಡ ಪತ್ನಿ ರಮ್ಯಾ ಸಿಟಿ ಸಿವಿಲ್ ನ್ಯಾಯಾಲಯದ ಮೊರೆ ಹೋಗಿದ್ದರು. ರಮ್ಯಾ ಅವರ ಅರ್ಜಿಯನ್ನು ಮಾನ್ಯ ಮಾಡಿದ ಸಿಟಿ ಸಿವಿಲ್ ನ್ಯಾಯಾಲಯ ಮಂಗಳವಾರ ತಡೆಯಾಜ್ಞೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News