ಕೇಂದ್ರ ಸಚಿವ ಅಕ್ಬರ್ ವಿರುದ್ಧ ತನಿಖೆ ನಡೆಯಲಿ: ಮನೇಕಾ ಗಾಂಧಿ

Update: 2018-10-09 17:02 GMT

ಹೊಸದಿಲ್ಲಿ, ಅ.9: ಕೇಂದ್ರ ಸಚಿವ ಎಂ.ಜೆ. ಅಕ್ಬರ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ಬಗ್ಗೆ ತನಿಖೆ ನಡೆಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮನೇಕಾ ಗಾಂಧಿ ಹೇಳಿದ್ದಾರೆ.

“ಈ ಬಗ್ಗೆ ತನಿಖೆ ನಡೆಯಲೇಬೇಕು” ಎಂದು ಮನೇಕಾ ಗಾಂಧಿ ಕೇಂದ್ರ ಸಚಿವರ ವಿರುದ್ಧದ ಲೈಂಗಿಕ ಕಿರುಕುಳ ಆರೋಪಗಳಿಗೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ್ದಾರೆ. ಇಂತಹ ಕೃತ್ಯಗಳ ಬಗ್ಗೆ ಭಾರತದಲ್ಲಿ ಮಹಿಳೆಯರು ಧ್ವನಿಯೆತ್ತಲು ಹೆದರುತ್ತಿದ್ದರು. ಇದೀಗ ಮಹಿಳೆಯರು ಈ ಬಗ್ಗೆ ಧ್ವನಿಯೆತ್ತಲು ಆರಂಭಿಸಿರುವಾಗ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಬೇಕು” ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News