ಹಾಂಕಾಂಗ್‌ನ ಮೂವರು ಕ್ರಿಕೆಟಿಗರ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ

Update: 2018-10-09 18:53 GMT

ದುಬೈ,ಅ.9: ಹಾಂಕಾಂಗ್ ಕ್ರಿಕೆಟ್ ತಂಡದ ಮೂವರು ಆಟಗಾರರಾದ ಹಸೀಬ್ ಅಮ್ಜದ್, ನದೀಮ್ ಅಹ್ಮದ್ ಮತ್ತು ಅವರ ಸಹೋದರ ಇರ್ಫಾನ್ ಅಹ್ಮದ್ ವಿರುದ್ದ 2014ರಲ್ಲಿ ಮ್ಯಾಚ್ ಫಿಕ್ಸಿಂಗ್‌ನಲ್ಲಿ ಭಾಗಿಯಾದ ಆರೋಪ ಕೇಳಿ ಬಂದಿದೆ. ಪಾಕಿಸ್ತಾನ ಮೂಲದ ಮೂವರು ಆಟಗಾರ ರಾದ ಅಮ್ಜದ್, ನದೀಮ್, ಇರ್ಫಾನ್ ವಿರುದ್ಧ ಐಸಿಸಿ ಭ್ರಷ್ಟಾಚಾರ ನಿಗ್ರಹ ಸಂಹಿತೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಖ್ಯಾತ ಸ್ಪಿನ್ನರ್ ನದೀಮ್ ಅಹ್ಮದ್ ಅವರು ಕಳೆದ ಸೆ.18ರಂದು ಭಾರತ ವಿರುದ್ಧ ಪಂದ್ಯದಲ್ಲಿ ಆಡಿದ್ದರು.10 ಓವರ್‌ಗಳಲ್ಲಿ ಒಂದೂ ವಿಕೆಟ್ ಪಡೆದಿರಲಿಲ್ಲ. ಇರ್ಫಾನ್ 2014ರಲ್ಲಿ ಮತ್ತು ಮತ್ತು ಹಸೀಬ್ ಅಮ್ಜದ್ 2016ರಲ್ಲಿ ಹಾಂಕಾಂಗ್ ತಂಡದ ಪರ ಕೊನೆಯ ಬಾರಿ ಆಡಿದ್ದರು. 28ರ ಹರೆಯದ ಇರ್ಫಾನ್ ಅಹ್ಮದ್ ವಿರುದ್ಧ 9 ಆರೋಪಗಳು ದಾಖಲಾಗಿವೆೆ. 2016ರಲ್ಲಿ ಇವರನ್ನು ತಂಡದಿಂದ ಅಮಾನತು ಮಾಡಲಾಗಿತ್ತು. ನದೀಮ್ ಮತ್ತು ಹಸೀಬ್ ವಿರುದ್ಧ ಐಸಿಸಿ ನೀತಿ ಸಂಹಿತೆಯ 5 ಸೆಕ್ಷನ್‌ನಡಿ ಪ್ರಕರಣ ದಾಖಲಾಗಿದೆ. ಇರ್ಫಾನ್ ವಿರುದ್ಧ ಜ.13, 2014ರಲ್ಲಿ ಸ್ಕಾಟ್ಲೆಂಡ್ ವಿರುದ್ಧ ಮತ್ತು ಜ.17, 2014ರಲ್ಲಿ ಕೆನಡಾ ವಿರುದ್ಧ ಪಂದ್ಯದಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಸಿದ ಆರೋಪ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News