ಏಶ್ಯನ್ ಪ್ಯಾರಾ ಗೇಮ್ಸ್: ಹರ್ವಿಂದರ್ ಸಿಂಗ್‌ಗೆ ಚಿನ್ನ

Update: 2018-10-10 08:43 GMT

ಜಕಾರ್ತ, ಅ.10: ಏಶ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತದ ಬಿಲ್ಲುಗಾರ ಹರ್ವಿಂದರ್ ಸಿಂಗ್ ಪುರುಷರ ವೈಯಕ್ತಿಕ ರಿಕರ್ವ್ ವಿಭಾಗದಲ್ಲಿ ಚಿನ್ನದ ಪದಕಕ್ಕೆ ಗುರಿ ಇಟ್ಟಿದ್ದಾರೆ.

ಬುಧವಾರ ನಡೆದ ಗೇಮ್ಸ್‌ನಲ್ಲಿ ಮೋನು ಪುರುಷರ ಡಿಸ್ಕಸ್ ಎಸೆತ ಎಫ್-11 ವಿಭಾಗದಲ್ಲಿ ಬೆಳ್ಳಿ ಜಯಿಸಿದರೆ, ಮುಹಮ್ಮದ್ ಯಾಸಿರ್ ಪುರುಷರ ಶಾಟ್‌ಪುಟ್ ಎಫ್46 ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.

ಆರ್ಚರಿ ಫೈನಲ್‌ನಲ್ಲಿ ಹರ್ವಿಂದರ್ ಚೀನಾದ ಝಾವೊ ಲಿಕ್ಸ್‌ಯು ವಿರುದ್ಧ 6-0 ಅಂತರದಿಂದ ಜಯ ಸಾಧಿಸಿದರು. ಈ ಮೂಲಕ ಗೇಮ್ಸ್‌ನಲ್ಲಿ ಭಾರತ ಒಟ್ಟು 7 ಚಿನ್ನ ಜಯಿಸಿತು.

ಟ್ರಾಕ್ ಆ್ಯಂಡ್ ಫೀಲ್ಡ್ ಇವೆಂಟ್‌ನಲ್ಲಿ ಡಿಸ್ಕಸ್ ಎಸೆತಗಾರ ಮೋನು 35.89 ಮೀ. ದೂರಕ್ಕೆ ಡಿಸ್ಕಸ್ ಎಸೆದು ಬೆಳ್ಳಿ ಜಯಿಸಿದರು. ಮೋನು ತನ್ನ ಮೂರನೇ ಪ್ರಯತ್ನದಲ್ಲಿ ಈ ಸಾಧನೆ ಮಾಡಿದರು. ಮುಹಮ್ಮದ್ ಯಾಸಿರ್ 14.22 ಮೀ. ದೂರಕ್ಕೆ ಶಾಟ್‌ಪುಟ್ ಎಸೆದು ಕಂಚು ತನ್ನದಾಗಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News