ಅನಧಿಕೃತ ವಾಸ: ಇರಾನ್ ಪ್ರಜೆಗೆ 1 ವರ್ಷ ಜೈಲು

Update: 2018-10-11 14:39 GMT

ಬೆಂಗಳೂರು, ಅ.11: ವೀಸಾ ಅವಧಿ ಮುಗಿದಿದ್ದರೂ ಸಹ ಅನಧಿಕೃತವಾಗಿ ನಗರದಲ್ಲಿ ವಾಸವಾಗಿದ್ದ ಆರೋಪ ಪ್ರಕರಣ ಸಂಬಂಧ ಇರಾನ್ ದೇಶದ ಪ್ರಜೆಗೆ ನ್ಯಾಯಾಲಯ 1 ವರ್ಷ ಸಾದಾ ಸಜೆ, 20 ಸಾವಿರ ರೂ. ದಂಡ ವಿಧಿಸಿದೆ.

ಇರಾನ್‌ದೇಶದ ಪ್ರಜೆ ಹಸೀಮ್ ಮುಮ್ತಾಜ್(32) ಎಂಬವರು ಜೈಲು ಶಿಕ್ಷೆಗೆ ಗುರಿಯಾದ ವ್ಯಕ್ತಿ ಎಂದು ತಿಳಿದುಬಂದಿದೆ.

ಗಿರಿನಗರ ವ್ಯಾಪ್ತಿಯಲ್ಲಿ ಈತ ತನ್ನ ವೀಸಾ ಅವಧಿ ಮುಗಿದಿದ್ದರೂ ಕೂಡ ಅನಧಿಕೃತವಾಗಿ ವಾಸವಿದ್ದ ಬಗ್ಗೆ ಗಿರಿನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಈತನ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ತನಿಖಾ ಕಾಲದಲ್ಲಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ವಿದೇಶಿ ನೋಂದಣಿ ಕಚೇರಿಗೆ ಮಾಹಿತಿ ನೀಡಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದರು. ಈ ಪ್ರಕರಣದ ಕಡತವನ್ನು ಎಸ್ಸೈ ಕೊಟ್ರೇಶಿ ಅವರು ಪಡೆದು ತನಿಖೆ ಪೂರ್ಣಗೊಳಿಸಿ 56ನೆ ಎಸಿಎಂಎಂ ನ್ಯಾಯಾಲಯಕ್ಕೆ ಈ ಪ್ರಜೆ ವಿರುದ್ಧ ದೋಷರೋಪಣಾಪಟ್ಟಿ ಸಲ್ಲಿಸಿದ್ದರು.

ನ್ಯಾಯಾಧೀಶರಾದ ಅತ್ತಿಕಲ್ ಪ್ರಭು ಅವರು ವಾದವನ್ನು ಆಲಿಸಿ ಅನಧಿಕೃತವಾಗಿ ವಾಸವಾಗಿದ್ದ ಇರಾನ್ ದೇಶದ ಪ್ರಜೆ ಹಸೀಮ್ ಮುಮ್ತಾಜ್‌ಗೆ ಒಂದು ವರ್ಷ ಸಾದಾ ಸಜೆ ಮತ್ತು 20 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News