ಪರಸರ ಸ್ನೇಹಿ ರೆಸಾರ್ಟ್ ಶೀಘ್ರ ಉದ್ಘಾಟನೆ: ಎಂ.ಜೆ.ಶ್ರೀಕಾಂತ್

Update: 2018-10-11 15:26 GMT

ಬೆಂಗಳೂರು, ಅ. 11: ಚಿಕ್ಕಮಗಳೂರಿನ ಮುಳಯ್ಯನಗಿರಿ ರಸ್ತೆಯ ರಾಜ್ಯ ಹೆದ್ದಾರಿಯಲ್ಲಿ ಪರಿಸರ ಸ್ನೇಹಿ ವಿಶಿಷ್ಟವಾದ ನಿಸರ್ಗಕ್ಕೆ ಹೊಂದಿಕೊಂಡಂತೆ ನಿರ್ಮಿಸಿದ ‘ಸಿರಿ ನೇಚರ್ ರೂಸ್ಟ್ಸ್’ಗೆ ರಾಶಿ ಇಕೊ ಟೂರಿಸಂ ಲಿ. ನಿರ್ಮಿಸಿರುವ ರೆಸಾರ್ಟ್ ಶೀಘ್ರದಲ್ಲೆ ಉದ್ಘಾಟನೆಯಾಗಲಿದೆ ಎಂದು ಎಂ.ಜೆ.ಶ್ರೀಕಾಂತ್ ತಿಳಿಸಿದ್ದಾರೆ.

ಗುರುವಾರ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, 21 ಎಕರೆಗಳ ವಿಸ್ತೀರ್ಣದಲ್ಲಿ 19 ಕಾಟೇಜ್ ಮತ್ತು ಜಾಕುಝಿಯ 12ಕಾಟೇಜ್‌ಗಳನ್ನು ಹೊಂದಿದೆ. 2.5ಎಕರೆ ವಿಸ್ತೀರ್ಣದ ಕ್ಲಬ್‌ಹೌಸ್ ಮತ್ತು ಮನರಂಜನೆಯ ಸೌಲಭ್ಯಗಳಲ್ಲಿ ಆಯುರ್ವೇದಿಕ್ ಹೆಲ್ತ್ ಸ್ಪಾ, ಬ್ಯಾಂಕ್ವೆಟ್ ಹಾಲ್, ಕಾನ್ಫರೆನ್ಸ್ ರೂಮ್, ಡೈನಿಂಗ್ ಏರಿಯಾ, ಒಳಾಂಗಣ ಮತ್ತು ಆಟದ ಮೈದಾನವಿದೆ ಎಂದರು.

ಈ ರೆಸಾರ್ಟ್ ವಾಸ್ತುಶಿಲ್ಪದಿಂದ ಬೇಸಿಗೆಯಲ್ಲಿ ಅನುಕೂಲಕರ ಒಳಾಂಗಣ ಉಷ್ಣತೆ ನೀಡುತ್ತವೆ ಮತ್ತು ನೈಸರ್ಗಿಕ ಉತ್ಪನ್ನಗಳ ಬಳಕೆ ಈ ಯೋಜನೆಯ ಒಟ್ಟಾರೆ ಇಂಗಾಲದ ಹೊರಹೊಮ್ಮುವಿಕೆ ಕಡಿಮೆ ಮಾಡುತ್ತವೆ. ಜನರು ಬರಿಗಾಲಿನ ಟ್ರೆಕ್ಕಿಂಗ್, ವಲಸೆ ಪಕ್ಷಿಗಳು, ಹರಡುತ್ತಿರುವ ಕಾಫಿ ಹೂವುಗಳು, ಮಿಂಚುಹುಳುಗಳ ಮಾಂತ್ರಿಕ ಬೆಳಕು ಮತ್ತಿತರೆ ವಿಶೇಷಗಳನ್ನು ಕಾಣಬಹುದು ಎಂದು ಶ್ರೀಕಾಂತ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News