ಶಿಕ್ಷಕರ ಕಾಲ್ಪನಿಕ ವೇತನ ವರದಿ ಜಾರಿಗೆ ಒತ್ತಾಯಿಸಿ ರ‍್ಯಾಲಿ

Update: 2018-10-11 17:18 GMT

ಬೆಂಗಳೂರು, ಅ. 11: ಅನುದಾನಿತ ವಿದ್ಯಾಸಂಸ್ಥೆಗಳ ಶಿಕ್ಷಕರ ಕಾಲ್ಪನಿಕ ವೇತನ ಸಮಸ್ಯೆ ಪರಿಹಾರ ಕುರಿತು ನೀಡಿರುವ ಬಸವರಾಜ ಹೊರಟ್ಟಿ ನೇತೃತ್ವದ ‘ಕಾಲ್ಪನಿಕ ವೇತನ’ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕೆಂದು ಆಗ್ರಹಿಸಿ ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘ ರ‍್ಯಾಲಿ ನಡೆಸಿತು.

ಗುರುವಾರ ನಗರದ ಸಂಗೊಳ್ಳಿರಾಯಣ್ಣ ಪ್ರತಿಮೆಯಿಂದ ಸ್ವಾತಂತ್ರ ಉದ್ಯಾನದವರೆಗೂ ಏರ್ಪಡಿಸಿದ್ದ, ಮೆರವಣಿಗೆಯಲ್ಲಿ ಸಂಘದ ಅಧ್ಯಕ್ಷ ಜಿ. ಹನುಮಂತಪ್ಪ ಮಾತನಾಡಿ, ರಾಜ್ಯದಲ್ಲಿನ ಅನುದಾನಿತ ಶಾಲೆಗಳಲ್ಲಿ 2006ಕ್ಕಿಂತ ಮೊದನಿಂದಲೂ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ರಾಜ್ಯ ಸರಕಾರಿ ಪಿಂಚಣಿ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿದರು. ಸಾವಿರ ಶಿಕ್ಷಕರು ಮಾಸಿಕ ಪಿಂಚಣಿಯಿಂದ ವಂಚಿತರಾಗಿದ್ದಾರೆ. ಪಿಂಚಣಿ ಇಲ್ಲದೆ ಈಗಾಗಲೇ ನಿವೃತ್ತಿ ಯಾಗಿರುವವರಿಗೆ ಮತ್ತು ಸೇವೆಯಲ್ಲಿ ಇರುವಾಗಲೇ ಸಾವನ್ನಪ್ಪಿದ ಶಿಕ್ಷಕರ ಕುಟುಂಬದ ಸದಸ್ಯರಿಗೆ ಪಿಂಚಣಿ ನೀಡಬೇಕು. ನೂತನ ಪಿಂಚಣಿ ಯೋಜನೆಯಲ್ಲಿನ ಗೊಂದಲಗಳನ್ನು ನಿವಾರಿಸಬೇಕು ಎಂದು ಒತ್ತಾಯಿಸಿದರು.

ಸರಕಾರ 2006 ಏಪ್ರಿಲ್ 1ರಂದು ನೂತನ ಪಿಂಚಣಿ ಯೋಜನೆ ಜಾರಿ ಮಾಡಿತು. 2006ರಲ್ಲಿ ನೇಮಕರಾಗಿ ತದ ನಂತರದ ವರ್ಷಗಳಲ್ಲಿ ನೇಮಕಾತಿ ಪತ್ರ ಪಡೆದಿರುವ ನೌಕರರು ರಾಜ್ಯದಲ್ಲಿದ್ದಾರೆ. ಅವರಿಗೆ ಹೊಸ ಯೋಜನೆ ಅನ್ವಯಿಸಲಾಗಿದೆ. ಇದರಿಂದಾಗಿ ಅವರು ಮಾಸಿಕ ಪಿಂಚಣಿಯಿಂದ ವಂಚಿತರಾಗಿದ್ದಾರೆ ಎಂದರು.

ಹತ್ತಾರು ವರ್ಷಗಳ ಕಾಲ ಮಕ್ಕಳಿಗೆ ವಿದ್ಯೆ ಬೋಧಿಸಿದ ಶಿಕ್ಷಕರಿಗೆ ಪಿಂಚಣಿ ಯೋಜನೆ ರೂಪಿಸಿಲ್ಲ. ಇದರಿಂದಾಗಿ ಅವರ ಕೊನೆಗಾಲದಲ್ಲಿ ಸಾಮಾಜಿಕ ಭದ್ರತೆ ಇಲ್ಲವಾಗಿದೆ ಎಂದು ಅಳಲು ತೊಡಿಕೊಂಡರು.

-ರಿಯಾಜ್ ಅಹ್ಮದ್, ಸನದಿ ಸಂಘದ ಗೌರವಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News