ಮಲೆಗಳಲ್ಲಿ ಮದುಮಗಳು: ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ

Update: 2018-10-11 17:27 GMT

ಬೆಂಗಳೂರು, ಅ. 11: ರಾಷ್ಟ್ರಕವಿ ಕುವೆಂಪು ಅವರ 114ನೇ ಜನ್ಮ ದಿನದ ಆಚರಣೆ ಅಂಗವಾಗಿ ರಾಷ್ಟ್ರಕವಿ ಕುವೆಂಪು ಪ್ರತಿಷ್ಟಾನದಿಂದ ಮಲೆಗಳಲ್ಲಿ ಮದುಮಗಳು ಕಾದಂಬರಿಯ ಬಗ್ಗೆ ಕಾಲೇಜು ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.

ಕುವೆಂಪು ಅವರ ಸಾಹಿತ್ಯ ಓದನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ರೂಪಿಸಿರುವ ಈ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದವರಲ್ಲಿ ಪ್ರತಿ ಜಿಲ್ಲೆಯಿಂದ ತಲಾ ಒಬ್ಬ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಗೆ ಡಿ.29 ಮತ್ತು 30ರಂದು ಆಯೋಜಿಸಲಾಗಿರುವ ಸಾಹಿತ್ಯ ಶಿಬಿರದಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು. ಉಚಿತ ವಸತಿ, ಊಟದ ಸೌಲಭ್ಯ ನೀಡಿ, ಪ್ರಯಾಣವೆಚ್ಚವನ್ನು ಪ್ರತಿಷ್ಠಾನ ಭರಿಸುತ್ತದೆ. ಅವರಿಗೆ 500 ಮುಖ ಬೆಲೆಯ ಕುವೆಂಪು ಸಾಹಿತ್ಯದ ಕೃತಿಗಳನ್ನು ನೀಡಲಾಗುವುದು. ಅಲ್ಲದೇ ಒಟ್ಟು ಆಯ್ಕೆಯಾದ ಪ್ರಬಂಧಗಳಲ್ಲಿ ಮೂರು ಅತ್ಯುತ್ತಮ ರಚನೆಗಳಿಗೆ ಬಹುಮಾನ ನೀಡಿ ಗೌರವಿಸಲಾಗುವುದು.

ಸ್ಪರ್ಧಿಗಳು ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಾಗಿರಬೇಕು. 2 ಸಾವಿರ ಪದಗಳ ಮಿತಿಯಲ್ಲಿ ಪ್ರಬಂಧವಿರಬೇಕು. ಹೆಚ್ಚಿನ ಮಾಹಿತಿಗಾಗಿ 98808 02642 ಸಂಪರ್ಕಿಸಬಹುದು ಎಂದು ಪತ್ರಿಕಾ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News