ದ್ವಿತೀಯ ಟೆಸ್ಟ್: ಮೊದಲ ದಿನ ವಿಂಡೀಸ್ ಸ್ಪರ್ಧಾತ್ಮಕ ಮೊತ್ತ

Update: 2018-10-12 11:50 GMT

ಹೈದರಾಬಾದ್, ಅ.12: ಭಾರತದ ವಿರುದ್ಧ ಆಲ್‌ರೌಂಡರ್ ರೋಸ್ಟನ್ ಚೇಸ್ ಅವರ ಆಕರ್ಷಕ ಬ್ಯಾಟಿಂಗ್ ನೆರವಿನಲ್ಲಿ ಪ್ರವಾಸಿ ವೆಸ್ಟ್‌ಇಂಡೀಸ್ ತಂಡ ಇಲ್ಲಿ ಶುಕ್ರವಾರ ಆರಂಭಗೊಂಡ ದ್ವಿತೀಯ ಟೆಸ್ಟ್‌ನಲ್ಲಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದೆ.

ಮೊದಲ ದಿನದಾಟದಂತ್ಯಕ್ಕೆ ವೆಸ್ಟ್‌ಇಂಡೀಸ್ 95 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 295 ರನ್ ದಾಖಲಿಸಿದೆ.

ಆಲ್‌ರೌಂಡರ್ ಚೇಸ್ ಔಟಾಗದೆ 98 ರನ್(174ಎ, 7ಬೌ,1ಸಿ) ಮತ್ತು ದೇವೇಂದ್ರ ಬಿಶೊ ಔಟಾಗದೆ 2 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ವಿಂಡೀಸ್ ಕುಲ್‌ದೀಪ್ ಯಾದವ್ ಮತ್ತು ಉಮೇಶ್ ಉಮೇಶ್ ಯಾದವ್ ದಾಳಿಗೆ ಸಿಲುಕಿ ಅಗ್ರಸರದಿಯ ವಿಕೆಟ್‌ಗಳನ್ನು ಬೇಗನೇ ಕೈ ಚೆಲ್ಲಿತ್ತು.

 ನಾಯಕ ಜೇಸನ್ ಹೋಲ್ಡರ್ ಅರ್ಧಶತಕ(52) ಮತ್ತು ಚೇಸ್ ತಂಡಕ್ಕೆ ಉಪಯುಕ್ತ ಕೊಡುಗೆ ನೀಡಿದರು. ಇದರಿಂದಾಗಿ ವಿಂಡೀಸ್‌ನ ಸ್ಕೋರ್ 290ರ ಗಡಿ ದಾಟಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News