ರಫೇಲ್ ಯುದ್ಧ ವಿಮಾನ ಖರೀದಿ ಪ್ರಕರಣದ ವಿರುದ್ಧ ಜನಜಾಗೃತಿ

Update: 2018-10-12 14:53 GMT

ಬೆಂಗಳೂರು, ಅ. 12: ಬೆಂಗಳೂರು ಕೇಂದ್ರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯು ಕೇಂದ್ರ ಸರಕಾರದ ರಫೇಲ್ ಯುದ್ಧ ವಿಮಾನ ಖರೀದಿ ಪ್ರಕರಣ ವಿರುದ್ದ ಜನಜಾಗೃತಿ ಅಭಿಯಾನವನ್ನು ಕೈಗೊಂಡು ಪ್ರತಿಭಟನೆ ನಡೆಸಿದೆ.

ಶುಕ್ರವಾರ ನಗರದ ಮೌರ್ಯ ವೃತ್ತದಲ್ಲಿನ ಗಾಂಧಿ ಪ್ರತಿಮೆ ಬಳಿ ಪ್ರತಿಭಟಿಸಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ರಫೇಲ್ ಯುದ್ದ ವಿಮಾನಕ್ಕೆ 600ಕೋಟಿ ಮೀಸಲಿಡಲಾಗಿತ್ತು. ಆದರೆ. ಬಿಜೆಪಿ ಸರಕಾರದ ಅವಧಿಯಲ್ಲಿ ಯುದ್ದ ವಿಮಾನ ಖರೀದಿಗೆ 1600ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಆರೋಪಿಸಿದರು.

ಒಂದು ರಫೇಲ್ ಯುದ್ದ ವಿಮಾನಕ್ಕೆ 1ಸಾವಿರ ಕೋಟಿ ಹೆಚ್ಚಳವನ್ನು ರಿಲಯನ್ಸ್ ಕಂಪನಿ ಮಾಲೀಕರಾದ ಅಂಬಾನಿ ಮಧ್ಯಸ್ತಿಕೆಯಲ್ಲಿ ವ್ಯವಹಾರ ನಡೆಸಲಾಗಿದೆ. ಅಲ್ಲದೆ, ಪಾರದರ್ಶಕ ಆಡಳಿತ ಎಂದು ಸಾರ್ವಜನಿಕರಿಗೆ ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ ಭರವಸೆಗಳನ್ನೆಲ್ಲ ಮರೆತು ಹೋಗಿದೆ ಎಂದು ಬಿಜೆಪಿ ಪಕ್ಷದ ‘ವೈಫಲ್ಯಗಳ ಪ್ರಚಾರ ವಾಹನ’ ಬಿಡುಗಡೆ ಮಾಡುವ ಮೂಲಕ ರಫೇಲ್ ಹಗರಣ ವಿವರವುಳ್ಳ ಕರಪತ್ರಗಳನ್ನು ಸಾರ್ವಜನಿಕರಿಗೆ ವಿತರಿಸಿದರು.

ಪ್ರತಿಭಟನೆಯಲ್ಲಿ ಬೆಂಗಳೂರು ಕೇಂದ್ರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಜಿ.ಜನಾರ್ಧನ್, ಕೆಪಿಸಿಸಿ ವಕ್ತಾರರಾದ ಸಲೀಮ್ ಹಾಗೂ ಕಾಂಗ್ರೆಸ್ ಮುಖಂಡರಾದ ಪರಿಸರ ರಾಮಕೃಷ್ಣ, ಇರ್ಷಾರ್ದ ಬೇಗಂ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News