ಸೌದಿ: ಸಾರ್ವಜನಿಕ ಸೇವೆ ಆರಂಭಿಸಿದ ಮಕ್ಕಾ-ಮದೀನ ವೇಗದ ರೈಲು

Update: 2018-10-12 16:48 GMT

ಜಿದ್ದಾ, ಅ. 12: ಸೌದಿ ಅರೇಬಿಯದ ನೂತನ ಹರಮೈನ್ ಹೈಸ್ಪೀಡ್ ರೈಲನ್ನು ಗುರುವಾರ ಸಾರ್ವಜನಿಕ ಸೇವೆಗೆ ತೆರೆಯಲಾಯಿತು.

ಈ ರೈಲು ಮಕ್ಕಾ ಮತ್ತು ಮದೀನಾಗಳ ನಡುವೆ ಕಿಂಗ್ ಅಬ್ದುಲ್ಲಾ ಎಕನಾಮಿಕ್ ಸಿಟಿ ಮತ್ತು ಜಿದ್ದಾಗಳ ಮೂಲಕ ಓಡಾಡುತ್ತದೆ.

‘‘ಇದು ಸೌದಿ ಅರೇಬಿಯದ ಆಧುನಿಕ ಸಾರಿಗೆ ವ್ಯವಸ್ಥೆಯಲ್ಲಿ ರಾಷ್ಟ್ರೀಯ ಐತಿಹಾಸಿಕ ಮೈಲಿಗಲ್ಲಾಗಿದೆ’’ ಎಂದು ಸೌದಿ ಅರೇಬಿಯದ ಸಾರ್ವಜನಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷ ರುಮಯ್ಯ ಅಲ್-ರುಮಯ್ಯ ಹೇಳಿದರು.

 ರೈಲು ಗುರುವಾರದಿಂದ ರವಿವಾರದವರೆಗೆ ವಾರದಲ್ಲಿ ನಾಲ್ಕು ದಿನ ಓಡಾಡುತ್ತದೆ. ಬಳಿಕ ಈ ರೈಲು ಪ್ರತಿನಿತ್ಯ ಓಡಾಡುವ ನಿರೀಕ್ಷೆಯಿದೆ. ಆ ವೇಳೆಗೆ, ಮಕ್ಕಾ ಮತ್ತು ಮದೀನಾ ನಡುವಿನ ನೇರ ಪ್ರಯಾಣಕ್ಕೆ ಈ ರೈಲು 2 ಗಂಟೆ ತೆಗೆದುಕೊಳ್ಳಲಿದೆ ಹಾಗೂ ಎಕನಾಮಿಕ ಸಿಟಿ ಮತ್ತು ಜಿದ್ದಾಗಳಲ್ಲಿ ನಿಲುಗಡೆಯಿರುವ ಪ್ರಯಾಣಕ್ಕೆ ಹೆಚ್ಚುವರಿ 20 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.

ರೈಲು ತನ್ನ ಮೊದಲ ಪ್ರಯಾಣದಲ್ಲಿ 417 ಪ್ರಯಾಣಿಕರನ್ನು ಹೊತ್ತು ಮದೀನಾದಿಂದ ಮಕ್ಕಾಗೆ ಹೊರಟಿತು.

ಇದೇ ಸಮಯದಲ್ಲಿ ಕಿಂಗ್ ಅಬ್ದುಲ್ಲಾ ಎಕನಾಮಿಕ್ ಸಿಟಿ ಮತ್ತು ಜಿದ್ದಾ ಮೂಲಕ ಮಕ್ಕಾದಿಂದ ಮದೀನಾಗೆ ಹೊರಟ ರೈಲು ಕೂಡ ಇಷ್ಟೇ ಸಂಖ್ಯೆಯ ಪ್ರಯಾಣಿಕರನ್ನು ಸಾಗಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News