ಉಪ ಚುನಾವಣೆಗೆ ಕಾರಣಕರ್ತರನ್ನು ತಿರಸ್ಕರಿಸಿ: ಎಎಪಿ

Update: 2018-10-12 17:26 GMT

ಬೆಂಗಳೂರು, ಅ.12: ಕುರ್ಚಿಯ ಮೋಹದಿಂದ ಅನಗತ್ಯ ಉಪ ಚುನಾವಣೆಗಳಿಗೆ ಕಾರಣಕರ್ತರಾಗಿರುವ ಪಕ್ಷಗಳು ಹಾಗೂ ವ್ಯಕ್ತಿಗಳನ್ನು ತಿರಸ್ಕರಿಸಲು ಜನತೆಗೆ ಆಮ್ ಆದ್ಮಿ ಪಕ್ಷ ಕರೆ ನೀಡಿದೆ.

ಶುಕ್ರವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿ ಜಗ್ಗದೀಶ್ ಮಾತನಾಡಿ, ಶಿವಮೊಗ್ಗ, ಬಳ್ಳಾರಿ, ಮಂಡ್ಯದಲ್ಲಿ ಸಂಸದರಾಗಿ ಆಯ್ಕೆಯಾಗಿ ರಾಜೀನಾಮೆ ನೀಡಿದಂತಹ ಬಿ.ಎಸ್.ಯಡಿಯೂರಪ್ಪ, ಶ್ರೀರಾಮುಲು ಹಾಗೂ ಸಿ.ಎಸ್.ಪುಟ್ಟರಾಜು ಕೇವಲ ಅಧಿಕಾರದ ಲಾಲಸೆಗಾಗಿ ಜನತೆ ನೀಡಿದಂತಹ ಅವಕಾಶವನ್ನು ತಿರಸ್ಕರಿಸಿ ಈ ಉಪಚುನಾವಣೆಗೆ ಕಾರಣಕರ್ತರಾಗಿದ್ದಾರೆ ಎಂದು ಆರೋಪ ಮಾಡಿದರು.

ಇಂತವರುಗಳಿಂದ ರಾಜ್ಯಕ್ಕಾಗಲಿ, ದೇಶಕ್ಕಾಗಲೀ ಯಾವುದೇ ಮಹತ್ತರ ಕಾರ್ಯಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಒಂದು ಅಂದಾಜಿನ ಪ್ರಕಾರ ಪ್ರತಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಎಂಟು ಕೋಟಿ ರೂಪಾಯಿಗಳು ಖರ್ಚಾಗಲಿದ್ದು, ಈ ಮೊತ್ತವನ್ನು ಐದು ವರ್ಷಗಳ ಬಡ್ಡಿ ಸಮೇತವಾಗಿ ಈ ಉಪಚುನಾವಣೆಗೆ ಕಾರಣರಾದವರಿಂದ ವಸೂಲಿ ಮಾಡಬೇಕೆಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News