ನಾಪತ್ತೆಯಾದ ಪತ್ನಿ-ಮಗಳು: ಹುಡುಕಿಕೊಡುವಂತೆ ಠಾಣೆಗೆ ದೂರು ನೀಡಿದ ವ್ಯಕ್ತಿ

Update: 2018-10-12 17:29 GMT

ಬೆಂಗಳೂರು, ಅ.12: ಮನೆಬಿಟ್ಟು ಹೋದ ಪತ್ನಿ ಮತ್ತು ಮಗಳನ್ನು ಹುಡುಕಿಕೊಡುವಂತೆ ವ್ಯಕ್ತಿಯೊಬ್ಬರು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 

ಪತ್ನಿ ವಿಜಯಾ (45), ಮಗಳು ತೇಜಸ್ವಿನಿ(20) ಅ.1ರಂದು ಮಧ್ಯಾಹ್ನ 12 ಗಂಟೆಗೆ ಮನೆ ಬಿಟ್ಟು ಹೋದವರು ಇದುವರೆಗೂ ವಾಪಸ್ಸಾಗಿಲ್ಲ. ಎಲ್ಲ ಕಡೆ ಹುಡುಕಿದರೂ ಎಲ್ಲೂ ಸಿಗದ ಕಾರಣ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ದುಂಡುಮುಖ, 5 ಎತ್ತರ, ಎಣ್ಣೆಗೆಂಪು ಮೈಬಣ್ಣ ಸಾಧಾರಣ ಮೈಕಟ್ಟು ಇರುವ 45 ವರ್ಷದ ವಿಜಯ ಅವರು ಕನ್ನಡ ಮಾತನಾಡುತ್ತಾರೆ. ಮಗಳು ತೇಜಸ್ವನಿ 4.5 ಅಡಿ ಎತ್ತರ, ಗೋದಿ ಮೈಬಣ್ಣ ಹೊಂದಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News