ದೀಪಾ ಮಲಿಕ್‌ಗೆ ಕಂಚು

Update: 2018-10-12 18:49 GMT

ಜಕಾರ್ತ, ಅ.12: ಪ್ಯಾರಾಲಿಂಪಿಕ್ಸ್ ನಲ್ಲಿ ಪದಕ ಜಯಿಸಿದ್ದ ಭಾರತದ ದೀಪಾ ಮಲಿಕ್ ವನಿತೆಯರ ಎಫ್ 51/85/53 ಡಿಸ್ಕಸ್‌ನಲ್ಲಿ ಕಂಚು ಪಡೆದಿದ್ದಾರೆ.

ಶುಕ್ರವಾರ ನಡೆದ ಸ್ಪರ್ಧೆಯಲ್ಲಿ ದೀಪಾ ನಾಲ್ಕನೇ ಪ್ರಯತ್ನದಲ್ಲಿ 9.67 ಮೀಟರ್ ದೂರಕ್ಕೆ ಡಿಸ್ಕಸ್ ಎಸೆದು ಕಂಚು ಪಡೆದರು. ಇರಾನ್‌ನ ಎಲ್ನಾಝ್ ದಾರಬಿಯನ್ (10.71 ಮೀ) ಹೊಸ ದಾಖಲೆಯೊಂದಿಗೆ ಚಿನ್ನ ಮತ್ತು ಬಹರೈನ್‌ನ ಫಾತಿಮಾ ನೆಝಾಮ್ (9.87 ಮೀ) ಬೆಳ್ಳಿ ಪದಕವನ್ನು ಹಂಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News