ರೋಸ್ಟನ್ ಚೇಸ್ ಶತಕ: ವಿಂಡೀಸ್ ಮೊದಲ ಇನಿಂಗ್ಸ್ 311ಕ್ಕೆ ಆಲೌಟ್

Update: 2018-10-13 05:20 GMT

ಹೈದರಾಬಾದ್, ಅ.13: ಭಾರತದ ವಿರುದ್ಧ ವೆಸ್ಟ್‌ಇಂಡಿಸ್‌ನ ಆಲ್‌ರೌಂಡರ್ ರೋಸ್ಟನ್ ಚೇಸ್ ಆಕರ್ಷಕ ಶತಕ ದಾಖಲಿಸಿದ್ದಾರೆ.

ದ್ವಿತೀಯ ಟೆಸ್ಟ್‌ನ ಎರಡನೇ ದಿನವಾಗಿರುವ ಶನಿವಾರ ವೆಸ್ಟ್ ಇಂಡೀಸ್ ಮೊದಲ ಇನಿಂಗ್ಸ್ ನಲ್ಲಿ 101.4 ಓವರ್‌ಗಳಲ್ಲಿ 311 ರನ್‌ಗಳಿಗೆ ಆಲೌಟಾಗಿದೆ

ಮೊದಲ ದಿನದಾಟದಂತ್ಯಕ್ಕೆ ವೆಸ್ಟ್‌ಇಂಡೀಸ್ 95 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 295 ರನ್ ದಾಖಲಿಸಿತ್ತು. ಈ ಮೊತ್ತಕ್ಕೆ 16ರನ್ ಸೇರಿಸುವಷ್ಟರಲ್ಲಿ ಆಲೌಟಾಗಿದೆ. ಆಲ್‌ರೌಂಡರ್ ಚೇಸ್ ಔಟಾಗದೆ 98 ರನ್ ಮತ್ತು ದೇವೇಂದ್ರ ಬಿಶೊ ಔಟಾಗದೆ 2 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು.

ಬಿಶೂ ಹಿಂದಿನ ದಿನದ ಮೊತ್ತಕ್ಕೆ 1ರನ್‌ನ್ನು ಸೇರಿಸದೆ ಉಮೇಶ್ ಯಾದವ್ ಅವರ ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.

ಚೇಸ್ 24ನೇ ಟೆಸ್ಟ್‌ನಲ್ಲಿ 176 ಎಸೆತಗಳಲ್ಲಿ 7ಬೌಂಡರಿ 1 ಸಿಕ್ಸರ್ ನೆರವಿನಲ್ಲಿ 4ನೇ ಶತಕ ಗಳಿಸಿದರು. ಅವರು 106 ರನ್(189ಎ, 8ಬೌ,1ಸಿ) ಗಳಿಸಿ ಉಮೇಶ್ ಯಾದವ್‌ಗೆ ವಿಕೆಟ್ ಒಪ್ಪಿಸಿದರು. ಶಾನನ್ ಗೇಬ್ರಿಲ್ ಖಾತೆ ತೆರೆಯದೆ ನಿರ್ಗಮಿಸಿದರು.

ಇಂದು ಪತನಗೊಂಡ ಮೂರು ವಿಕೆಟ್‌ಗಳನ್ನು ತನ್ನ ಖಾತೆಗೆ ಸೇರಿಸಿಕೊಳ್ಳುವ ಮೂಲಕ ಉಮೇಶ್ ಯಾದವ್ 88ಕ್ಕೆ 6 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು. ಕುಲ್‌ದೀಪ್ ಯಾದವ್ 85ಕ್ಕೆ 3 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News