ಬಿಬಿಎಂಪಿ ಸ್ಮಶಾನಗಳ ಅವ್ಯವಸ್ಥೆಗೆ ಮೇಯರ್ ಗಂಗಾಬಿಕೆ ಅಸಮಾಧಾನ
ಬೆಂಗಳೂರು, ಅ.13: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎಲ್ಲ ಸ್ಮಶಾನಗಳಲ್ಲಿ ಗಿಡ- ಗಂಟಿಗಳನ್ನು ತೆರವು ಗೊಳಿಸಲು ಆಂದೋಲನ ನಡೆಸುವಂತೆ ಎಲ್ಲ ವಲಯದ ಜಂಟಿ ಆಯುಕ್ತರಿಗೆ ಬಿಬಿಎಂಪಿ ಮೇಯರ್ ಗಂಗಾಂಬಿಕೆ ಆದೇಶಿಸಿದ್ದಾರೆ.
ಶನಿವಾರ ನಗರದ ವಿಲ್ಸನ್ ಗಾರ್ಡ್‌ನ ಸ್ಮಶಾನಕ್ಕೆ ಭೇಟಿ ನೀಡಿ ತೀವ್ರ ಸ್ವಚ್ಛ್ಛ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇನ್ನೆರೆಡು ದಿನಗಳಲ್ಲಿ ಎಲ್ಲವನ್ನು ತೆರವುಗೊಳಿಸಿ ಶುಚಿತ್ವ ಕಾಪಾಡುವಂತೆ ಅಧಿಕಾರಗಳಿಗೆ ಸೂಚಿಸಿ, ಎಲ್ಲ ಸ್ಮಶಾನಗಳ ಸ್ವಚ್ಛತೆ ಬಗ್ಗೆ ತಮಗೆ ವರದಿ ಸಲ್ಲಿಸುವಂತೆ ಆದೇಶಿಸಿದರು.
ನಗರದ ಬಹುತೇಕ ಸ್ಮಶಾನಗಳು ಸ್ವಚ್ಛವಾಗಿಲ್ಲದಿರುವುದು ಗಮನಕ್ಕೆ ಬಂದಿದ್ದು, ಮುಂದಿನ ಪಾಲಿಕೆ ಬಜೆಟ್‌ನಲ್ಲಿ ಇದಕ್ಕೆ ಪ್ರತ್ಯೇಕ ಅನುದಾನ ಒದಗಿಸಿ, ವಾರ್ಷಿಕ ನಿರ್ವಹಣಾ ಮಾಡುವ ಮೂಲಕ ಸ್ಮಶಾನಗಳನ್ನು ಸ್ವಚ್ಛವಾಗಿಟ್ಟುಕೊಳ್ಳಲಾಗುವುದು ಎಂದು ತಿಳಿಸಿದರು.
ಕಳೆದ ವಾರ ಪಿತೃಪಕ್ಷವಾಗಿದ್ದರಿಂದ ವಿಲ್ಸನ್ ಗಾರ್ಡನ್ ಸ್ಮಶಾನದಲ್ಲಿ ಪೂರ್ವಜರಿಗೆ ಅರ್ಪಿಸಿದ ಪೂಜಾ ಸಾಮಾಗ್ರಿಗಳು ಅಲ್ಲಯೆ ಬಿದ್ದಿದ್ದವು. ಇದನ್ನು ಕಂಡ ಮೇಯರ್ ಪಿತೃ ಪಕ್ಷ ಕಳೆದು ಹಲವಾರು ದಿನಗಳು ಕಳೆದಿದ್ದರೂ ಸ್ವಚ್ಛ ಮಾಡಿಲ್ಲದರ ಬಗ್ಗೆ ಅಧಿಕಾರಿಗಳ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.
ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್ ಹಾಗೂ ಬಿಬಿಎಂಪಿ ಅಧಿಕಾರಿಗಳು ಉಪಸ್ಥಿತರಿದ್ದರು.