ಕಾಡಿನ ಜೀವಿಗಳೊಂದಿಗೆ ಲೋಕೇಶ್ ಮೊಸಳೆ

Update: 2018-10-13 16:50 GMT

ಲೋಕೇಶ್ ಮೊಸಳೆ ಕರ್ನಾಟಕದ ವನ್ಯಜೀವಿ ಛಾಯಾಗ್ರಾಹಕರಲ್ಲಿ ತಮ್ಮದೇ ವಿಶಿಷ್ಟ ಛಾಪು ಮೂಡಿಸಿರುವವರಲ್ಲಿ ಪ್ರಮುಖರು. ಕೆಲ ಕಾಲ ಪತ್ರಕರ್ತರಾಗಿ, ದಶಕ ಕಾಲ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪಾಠ ಹೇಳುತ್ತಿದ್ದ ಲೋಕೇಶ್ ಹಾಸನ ಬಳಿಯ ಮೊಸಳೆ ಗ್ರಾಮದವರು.

ವನ್ಯಜೀವಿ ಫೋಟೊಗ್ರಫಿಯಲ್ಲದೆ ತಾವು ಸೆರೆಹಿಡಿದ ಛಾಯಾಚಿತ್ರಗಳ ಎಗ್ಸಿಬಿಷನ್‌ಗಳನ್ನು ಲೋಕೇಶ್ ನಡೆಸುತ್ತಿದ್ದಾರೆ. ಈ ಹಿಂದೆ ಕಾಡು ಬದುಕಿನ ಹಾಡು-ಪಾಡು, ಶೀರ್ಷಿಕೆಯ ಫೋಟೊ ಎಗ್ಸಿಬಿಷನ್‌ಗಳಾಗಿವೆ.

ವನ್ಯಜೀವಿ ಛಾಯಾಗ್ರಹಣದಲ್ಲಿ ಆಸಕ್ತಿ ಇರುವವರಿಗೆ ಲೋಕೇಶ್ ಮೊಸಳೆ ಆಗಾಗ್ಗೆ ವರ್ಕ್‌ಶಾಪ್‌ಗಳನ್ನು ನಡೆಸುತ್ತಿರುತ್ತಾರೆ. ಅದರ ಪ್ರಯೋಜನ ಪಡೆದ ಅನೇಕರು ಈಗ ಜನಜೀವನ, ವನ್ಯಜೀವಿ, ಪಕ್ಷಿಲೋಕಗಳ ಬದುಕನ್ನು ಅದ್ಭುತವಾಗಿ ತಮ್ಮ ಕ್ಯಾಮರಾ ಮೂಲಕ ದಾಖಲಿಸುತ್ತಿದ್ದಾರೆ. ಪರಿಸರದ ಬಗೆಗಿನ ಕಾಳಜಿ, ತಾಂತ್ರಿಕ ಪರಿಪೂರ್ಣತೆಗಾಗಿ ಹಂಬಲ ಹಾಗೂ ಹೊಸದನ್ನೇನಾದರೂ ಸೃಷ್ಟಿಸುವ ಆಕಾಂಕ್ಷೆಯಿರುವ ಒಂದು ಫೋಟೊಗ್ರಾಫರ್‌ಗಳ ಗುಂಪೇ ಈಗ ಲೋಕೇಶ್ ಮೊಸಳೆಯವರೊಂದಿಗೆ ಕ್ರಿಯಾಶೀಲವಾಗಿದೆ.

ಕಣ್ಣಿಗೆ ಹಬ್ಬವೆನಿಸುವ ಲೋಕೇಶ್ ಮೊಸಳೆಯವರ ವನ್ಯಜೀವಿ ಬದುಕಿನ ಫೋಟೊ ಎಗ್ಸಿಬಿಷನ್ ಇದೇ ಅಕ್ಟೋಬರ್ 16ರಿಂದ 21ರವರೆಗೆ ಬೆಂಗಳೂರಿನ ಚಿತ್ರಕಲಾ ಪರಿಷತ್‌ನಲ್ಲಿ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News