ಸಮಾಜದ ಬದಲಾವಣೆಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು: ಎರಿಕ್‌ ರಾಬಿನ್‌ಸನ್

Update: 2018-10-13 16:51 GMT

ಬೆಂಗಳೂರು, ಅ. 13: ಸಮಾಜದ ಬದಲಾವಣೆಗೆ ಹೆಣ್ಣು ಮಕ್ಕಳು ಹರಿಕಾರರಾಗಲಿ. ಆ ನಿಟ್ಟಿನಲ್ಲಿ ಯುವತಿಯರಿಗೆ ಅಗತ್ಯವಾದ ಬೆಂಬಲ ನೀಡುವುದು ಸಂಘ, ಸಂಸ್ಥೆಗಳ ಆದ್ಯ ಕರ್ತವ್ಯವಾಗಬೇಕು ಎಂದು ಕೆನೆಡಿಯನ್ ಹೈ ಕಮಿಷನ್‌ನ ಹಿರಿಯ ವಾಣಿಜ್ಯ ಆಯುಕ್ತ ಎರಿಕ್‌ರಾಬಿನ್‌ಸನ್ ಹೇಳಿದರು.

ಶನಿವಾರ ಅಂತಾರಾಷ್ಟ್ರೀಯ ಹೆಣ್ಣು ಮಗು ದಿನಾಚರಣೆಯ ಪ್ರಯುಕ್ತ ಎಂಬೆಸಿ ಸಮೂಹವು ನಗರದ ಹಿಲ್ಟನ್ ಎಂಬೆಸಿ ಗಾಲ್ಫ್‌ಲಿಂಕ್‌ನಲ್ಲಿರುವ ಶಾಂತಿಭವನ ವಸತಿ ಶಾಲೆಯ 12 ವಿದ್ಯಾರ್ಥಿನಿಯರನ್ನು ಸತ್ಕರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇಂದಿನ ಯುವತಿಯರು ಭವಿಷ್ಯದಲ್ಲಿ ದೇಶವನ್ನು ಮುನ್ನೆಡುವ ನಾಯಕಿಯರಾಗಿ ಬೆಳೆಯಬೇಕು. ಈ ನಿಟ್ಟಿನಲ್ಲಿ ಈಗಿನಿಂದಲೆ ಯುವತಿಯರ ಸರ್ವತೋಮುಖ ಬೆಳವಣಿಗೆಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಯುವತಿಯರಿಗೆ ಎಲ್ಲ ಕ್ಷೇತ್ರದ ಅನುಭವವನ್ನು ಪಡೆಯಬೇಕೆಂದು ಅವರು ಆಶಿಸಿದರು.

ಶಾಂತಿಭವನ ವಸತಿ ಶಾಲೆಯ ವಿದ್ಯಾರ್ಥಿನಿ ವೈಶಾಲಿ ಮಾತನಾಡಿ, ಹೆಣ್ಣು ಮಕ್ಕಳ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮ ನನಗೆ ಹೊಸ ಅನುಭವವನ್ನು ದೊರಕಿಸಿಕೊಟ್ಟಿದೆ. ಇಂತಹ ಅವಕಾಶಗಳು ನಮಗೆ ಸಿಗುವುದು ಅತ್ಯಂತ ಅಪರೂಪ. ಈ ಕಾರ್ಯಕ್ರಮದ ಮೂಲಕ ಶಿಕ್ಷಣದ ನಿಜವಾದ ಅಗತ್ಯವನ್ನು ತಿಳಿದುಕೊಂಡೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News