ದ್ವಿತೀಯ ಟೆಸ್ಟ್: ಮತ್ತೊಮ್ಮೆ ಪಂತ್ 92ರಲ್ಲಿ ಔಟ್

Update: 2018-10-14 05:14 GMT

  ಹೈದರಾಬಾದ್, ಅ.14: ಇಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಕ್ರಿಕೆಟ್ ಟೆಸ್ಟ್‌ನಲ್ಲಿ ವಿಂಡೀಸ್ ವಿರುದ್ಧ ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಇಂದು ಶತಕ ವಂಚಿತಗೊಂಡರು.

ಟೆಸ್ಟ್‌ನ ಎರಡನೇ ದಿನವಾಗಿದ್ದ ಶನಿವಾರ ದಿನದಾಟದಂತ್ಯಕ್ಕೆ ಭಾರತ ಮೊದಲ ಇನಿಂಗ್ಸ್‌ನಲ್ಲಿ 81 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 308 ರನ್ ಗಳಿಸಿತ್ತು 75 ರನ್ ಗಳಿಸಿರುವ ಅಜಿಂಕ್ಯ ರಹಾನೆ ಮತ್ತು 85 ರನ್ ಗಳಿಸಿದ್ದ ವಿಕೆಟ್ ಕೀಪರ್ ರಿಷಭ್ ಪಂತ್ ಔಟಾಗದೆ ಕ್ರೀಸ್‌ನಲ್ಲಿದ್ದರು

 52ನೇ ಟೆಸ್ಟ್ ಆಡುತ್ತಿರುವ ರಹಾನೆ 10ನೇ ಶತಕ ದಾಖಲಿಸುವ ಹಾದಿಯಲಿದ್ದ ರಹಾನೆ (80) ತನ್ನ ವೈಯಕ್ತಿಕ ಖಾತೆಗೆ 5 ರನ್ ಸೇರಿಸಿ ಹೋಲ್ಡರ್ ಎಸೆತದಲ್ಲಿ ಶಾಯಿ ಹೋಪ್‌ಗೆ ಕ್ಯಾಚ್ ನೀಡಿದರು. ಯುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಕಳೆದ ಟೆಸ್ಟ್‌ನಲ್ಲಿ 92 ರನ್ ಗಳಿಸಿ ಶತಕ ವಂಚಿತಗೊಂಡಿದ್ದರು. ಇದೀಗ ಎರಡನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲೂ ಶತಕ ದಾಖಲಿಸುವ ಪ್ರಯತ್ನದಲ್ಲಿ ಎಡವಿದ್ದಾರೆ. ಅವರು 92 ರನ್ (134ಎ, 11ಬೌ,2ಸಿ) ಗಳಿಸಿ ಗ್ಯಾಬ್ರಿಯಲ್ ಎಸೆತದಲ್ಲಿ ಹೆಟ್ಮೆಯರ್‌ಗೆ ಕ್ಯಾಚ್ ನೀಡಿದರು. ಇದರೊಂದಿಗೆ ಪಂತ್ ಮತ್ತೊಮ್ಮೆ ಶತಕ ವಂಚಿತಗೊಂಡರು. ಭಾರತ 89ನೇ ಓವರ್ ಮುಕ್ತಾಯಕ್ಕೆ 7 ವಿಕೆಟ್ ನಷ್ಟದಲ್ಲಿ 328 ರನ್ ಗಳಿಸಿದೆ. ರವೀಂದ್ರ ಜಡೇಜ(0) ಖಾತೆ ತೆರೆಯದೆ ನಿರ್ಗಮಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News