ಭಾರತದ ಪುರುಷರ, ಮಹಿಳಾ ಹಾಕಿ ತಂಡ ಪೈನಲ್ ಪ್ರವೇಶ

Update: 2018-10-14 18:35 GMT

ಬ್ಯುನಸ್ ಐರಿಸ್, ಅ.14:ಭಾರತದ ಪುರುಷರ ಹಾಗೂ ಮಹಿಳಾ ತಂಡ ಯೂತ್ ಒಲಿಂಪಿಕ್ಸ್‌ನಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿವೆ.

ಇಲ್ಲಿ ಶನಿವಾರ ನಡೆದ ಸೆಮಿ ಫೈನಲ್‌ನಲ್ಲಿ ಪುರುಷರ ತಂಡ ಆತಿಥೇಯ ಅರ್ಜೆಂಟೀನ ವಿರುದ್ಧ 3-1 ಅಂತರದಿಂದ ಜಯ ಸಾಧಿಸಿತು. ಮತ್ತೊಂದು ಅಂತಿಮ-4ರ ಪಂದ್ಯದಲ್ಲಿ ಮಹಿಳಾ ತಂಡ ಚೀನಾ ವಿರುದ್ಧ 3-0 ಅಂತರದಿಂದ ಗೆಲುವು ಸಾಧಿಸಿದೆ.

ಪುರುಷರ ತಂಡ ಫೈನಲ್‌ನಲ್ಲಿ ಮಲೇಶ್ಯಾವನ್ನು ಎದುರಿಸಿದರೆ, ಮಹಿಳಾ ತಂಡ ಅರ್ಜೆಂಟೀನವನ್ನು ಎದುರಿಸಲಿದೆ.

ಭಾರತ ಇದೇ ಮೊದಲ ಬಾರಿ ಯೂತ್ ಒಲಿಂಪಿಕ್ಸ್‌ನಲ್ಲಿಪಾಲ್ಗೊಂಡಿದೆ. ಕಳೆದ ಎರಡು ಆವೃತ್ತಿಯ ಒಲಿಂಪಿಕ್ಸ್‌ನಲ್ಲಿ ಭಾರತದಲ್ಲಿ ಭಾಗವಹಿಸಿರಲಿಲ್ಲ. ಪುರುಷರ ಸೆಮಿ ಫೈನಲ್‌ನಲ್ಲಿ ಸುದೀಪ್ ಚಿರ್‌ಮಾಕೊ(12ನೇ, 18ನೇ ನಿಮಿಷ)ಅವಳಿ ಗೋಲು ಬಾರಿಸಿದರು. ರಾಹುಲ್‌ಕುಮಾರ್ ರಾಜ್‌ಭರ್(3ನೇ)ಭಾರತಕ್ಕೆ ಆರಂಭಿಕ ಮುನ್ನಡೆ ಒದಗಿಸಿದರು.

ಮಹಿಳೆಯರ ಸೆಮಿ ಫೈನಲ್‌ನಲ್ಲಿ ಮುಮ್ತಾಝ್ ಖಾನ್(1ನೇ ನಿಮಿಷ), ರೀಟ್(5ನೇ ನಿ.) ಹಾಗೂ ಲಾಲ್‌ರೆಂಶಿಯಾಮಿ(13ನೇ ನಿ.)ತಲಾ ಒಂದು ಗೋಲು ಬಾರಿಸಿದರು. ಭಾರತ ಆರಂಭದಿಂದಲೇ ಪ್ರಾಬಲ್ಯ ಸಾಧಿಸಿ ಎದುರಾಳಿ ಚೀನಾ ತಂಡದ ಮೇಲೆ ಒತ್ತಡ ಹೇರಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News