ಅಫ್ಘಾನಿಸ್ತಾನ ಪ್ರೀಮಿಯರ್ ಲೀಗ್ ಝಝೈ 1 ಓವರ್ನಲ್ಲಿ 6 ಸಿಕ್ಸರ್

Update: 2018-10-14 18:48 GMT

ಶಾರ್ಜಾ, ಅ.14: ಅಫ್ಘಾನಿಸ್ತಾನದ ಉದಯೋನ್ಮುಖ ಆಟಗಾರ ಹಝ್ರತುಲ್ಲಾ ಝಝೈ 2 ಏಕದಿನ ಮತ್ತು 3 ಟ್ವೆಂಟಿ-20 ಪಂದ್ಯಗಳನ್ನು ಆಡಿದವರು. ಇಲ್ಲಿ ನಡೆಯುತ್ತಿರುವ ಅಫ್ಘಾನಿಸ್ತಾನ ಪ್ರೀಮಿಯರ್ ಲೀಗ್‌ನ ಟ್ವೆಂಟಿ-20 ಟೂರ್ನಿಯಲ್ಲಿ ಒಂದೇ ಓವರ್‌ನಲ್ಲಿ 6 ಸಿಕ್ಸರ್ ಸಿಡಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.

      ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಬಾಲ್ಕ್ ಲೆಜೆಂಡ್ ತಂಡದ ಎಡಗೈ ಸ್ಪಿನ್ನರ್ ಅಬ್ದುಲ್ಲಾ ಮಝರ್ ಅವರ ಓವರ್‌ನಲ್ಲಿ ಕಾಬೂಲ್ ಝ್ವಿನನ್ ತಂಡದ ಝಝೈ ಸಿಕ್ಸರ್‌ಗಳ ಸುರಿಮಳೆಗೈದರು. ಅವರ 6 ಸಿಕ್ಸರ್ ಮತ್ತು 1 ವೈಡ್ ಸೇರಿದಂತೆ 37 ರನ್ ಒಂದೇ ಓವರ್‌ನಲ್ಲಿ ತಂಡದ ಖಾತೆಗೆ ಸೇರ್ಪಡೆಗೊಂಡಿತು.

ಝಝೈ 17 ಎಸೆತಗಳಲ್ಲಿ 62 ರನ್ ಗಳಿಸಿ ಔಟಾದರು. ಅವರು 12 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಯುವರಾಜ್ ಸಿಂಗ್ ಮತ್ತು ಕ್ರಿಸ್ ಗೇಲ್ 12 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದ್ದಾರೆ. ಅವರ ಸಾಧನೆಯನ್ನು ಝಝೈ ಸರಿಗಟ್ಟಿದರು.

ಝಝೈ ವೇಗದ ಅರ್ಧ ಶತಕ ಕಾಬೂಲ್ ತಂಡದ ಗೆಲುವಿಗೆ ಸಾಕಾಗದೆ 21 ರನ್‌ಗಳ ಸೋಲು ಅನುಭವಿಸಿತು. ಕ್ರಿಸ್ ಗೇಲ್ (80) ಸ್ಫೋಟಕ ಬ್ಯಾಟಿಂಗ್ ನೆರವಿನಲ್ಲಿ ಬಾಲ್ಕ್ ತಂಡ 244 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಕಾಬೂಲ್ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 223 ರನ್ ಗಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News