ನಾನು ಆರೋಗ್ಯವಾಗಿದ್ದೇನೆ: ನಟ ಶಿವರಾಜ್ ಕುಮಾರ್

Update: 2018-10-15 16:38 GMT

ಬೆಂಗಳೂರು, ಅ. 15: ಕೆಮ್ಮು ಹಾಗೂ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ಆರೋಗ್ಯವಾಗಿದ್ದೇನೆ. ಅಭಿಮಾನಿಗಳು ಆತಂಕಪಡುವುದು ಬೇಡ ಎಂದು ನಟ ಶಿವರಾಜ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಸೋಮವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ್ವರ ಎಲ್ಲರಿಗೂ ಬರುತ್ತದೆ. ಅದೇ ರೀತಿ ನನಗೂ ಬಂದಿದೆ. ನಿನ್ನೆ ಏಕಾಏಕಿ ಚಳಿ ಜ್ವರ ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದೆ. ಇದೀಗ ಯಾವುದೇ ಸಮಸ್ಯೆ ಇಲ್ಲ ಎಂದರು.

ಆಸ್ಪತ್ರೆ ವೈದ್ಯ ಡಾ.ವಿ.ಕೆ.ಶ್ರೀನಿವಾಸ್ ಮಾತನಾಡಿ, ನಟ ಶಿವರಾಜ್‌ಕುಮಾರ್ ಅವರಿಗೆ ಜ್ವರ ಬಂದಿತ್ತು. ಈಗ ಅವರಿಗೆ ಎಲ್ಲ ಪರೀಕ್ಷೆ ನಡೆಸಿದ್ದು, ಆರೋಗ್ಯವಾಗಿದ್ದಾರೆ. ನಾಳೆ (ಅ.16) ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು. ಇನ್ನೆರಡು ದಿನ ವಿಶ್ರಾಂತಿ ಪಡೆದುಕೊಳ್ಳಲು ಸೂಚಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News