ಫೈನಾನ್ಸ್ ವ್ಯವಹಾರ: ಆರೋಪಿಯ ಬಂಧನಕ್ಕೆ ಶೋಧ

Update: 2018-10-15 16:40 GMT

ಬೆಂಗಳೂರು, ಅ. 15: ಫೈನಾನ್ಸ್ ವ್ಯವಹಾರ ನೆಪದಲ್ಲಿ ಮುಗ್ದ ಜನರಿಂದ ಹೆಚ್ಚಿನ ಹಣ ವಸೂಲಿ ಮಾಡುವ ಮೂಲಕ ಸಾರ್ವಜನಿಕರಿಗೆ ವಂಚಿಸುತ್ತಿದ್ದ ಆರೋಪಿ ಆರ್.ಜಿ. ರಿಕ್ರಿಯೇಷನ್ ಅಸೋಷಿಯೇಷನ್ ಕ್ಲಬ್‌ನ ಕಪಾಲಿ ಮೋಹನ್ ಬಂಧನಕ್ಕೆ ಸಿಸಿಬಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

ತಲೆ ಮರೆಸಿಕೊಂಡಿರುವ ಆರೋಪಿ ಹಣಕಾಸಿನ ವ್ಯವಹಾರದ ನೆಪದಲ್ಲಿ ಹಣವನ್ನು ಸಾಲವಾಗಿ ಸಾರ್ವಜನಿಕರಿಗೆ ಹಣ ನೀಡಿ, ಅವರಿಂದ ಕಾನೂನು ಬಾಹಿರವಾಗಿ ಅಧಿಕ ಪ್ರಮಾಣದ ಬಡ್ಡಿ ಪಡೆಯುತ್ತಾ, ಭದ್ರತೆಗಾಗಿ ನೀಡುತ್ತಿದ್ದ ಖಾಲಿ ಚೆಕ್ ಮತ್ತು ಪತ್ರಗಳ ಮೇಲೆ ಹೆಚ್ಚಿನ ಮೊತ್ತದ ಹಣ ಬರೆದುಕೊಂಡು ವಂಚಿಸುತ್ತಿದ್ದಾನೆಂಬ ಖಚಿತ ಮಾಹಿತಿ ಆಧಾರದ ಕಾರ್ಯಾನಿರತರಾದ ಸಿಸಿಬಿ ಪೊಲೀಸರು ಅ.14ರಂದು ದಾಳಿ ನಡೆಸಿದ್ದರು.

ಆತನ ಒಡೆತನದ ಮನೆ ಹಾಗೂ ಬಾಲಾಜಿ ಫೈನಾನ್ಸ್ ಕಚೇರಿಯ ಮೇಲೆ ದಾಳಿ ನಡೆಸಿದ ವೇಳೆ ಈತನ ಅಕ್ರಮ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ, ಸಾರ್ವಜನಿಕರಿಂದ ಪಡೆಯಲಾಗಿದ್ದ ಸಹಿ ಮಾಡಿರುವ ಖಾಲಿ ಚೆಕ್ಕುಗಳು, ಖಾಲಿ ಇ-ಸ್ಟಾಂಪ್ ಪೇಪರ್‌ಗಳು, ಖಾಲಿ ಆನ್ ಡಿಮ್ಯಾಂಡ್ ಪ್ರಾಮಿಸರಿ ನೋಟ್ ಮತ್ತು ನೋಟ್‌ಬುಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News